Select Your Language

Notifications

webdunia
webdunia
webdunia
webdunia

‘ಹೊಸ ಕಾನೂನು ಬರುವವರೆಗೂ ಮಕ್ಕಳನ್ನು ಮಾಡ್ತಾ ಇರಿ’

ಜನಸಂಖ್ಯೆ
ನವದೆಹಲಿ , ಶನಿವಾರ, 24 ಫೆಬ್ರವರಿ 2018 (08:46 IST)
ನವದೆಹಲಿ: ದೇಶವೇ ಜನ ಸಂಖ್ಯೆ ಹೆಚ್ಚಳದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದರೆ ಬಿಜೆಪಿ ಶಾಸಕರೊಬ್ಬರು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುತ್ತಾ ಇರಿ ಎಂದು ಮಹಿಳೆಯರಿಗೆ ಸಲಹೆ ಕೊಟ್ಟಿದ್ದಾರೆ!
 

ಮುಝಾಫರ್ ನಗರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಈ ಸಲಹೆ ಕೊಟ್ಟ ಮಹಾನುಭಾವ! ಹಿಂದೂಗಳು ಹೆಚ್ಚು ಹೆಚ್ಚು ಮಕ್ಕಳಿಗೆ ಜನ್ಮ ನೀಡಬೇಕು. ಜನನ ನಿಯಂತ್ರಣದ ಬಗ್ಗೆ ಹೊಸ ಕಾನೂನು ಬರುವವರೆಗೂ ಮಕ್ಕಳನ್ನು ಹೆರುತ್ತಾ ಇರು ಎಂದು ಪತ್ನಿಗೂ ಹೇಳಿದ್ದೇನೆ’ ಎಂದು ವಿಕ್ರಮ್ ಸೈನಿ ಹೇಳಿಕೊಂಡಿದ್ದಾರೆ.

‘ಹಿಂದೂಸ್ಥಾನ್ ಇರುವುದು ಹಿಂದೂಗಳಿಗೆ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ. ನನ್ನ ಪತ್ನಿ ನಮಗೆ ಇಬ್ಬರೇ ಮಕ್ಕಳು ಸಾಕು ಎಂದಾಗ ನಾಲ್ಕೋ ಐದೋ ಇರಲಿ ಎಂದಿದ್ದೇನೆ. ಹಿಂದೂಗಳು ಮಾತ್ರ ಇಬ್ಬರೇ ಮಕ್ಕಳು ಸಾಕು ಎಂಬ ನಿಯಮ ಪಾಲಿಸುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ’ ಎಂದು ತಮ್ಮ ಹೇಳಿಕೆಗೆ ಸಮರ್ಥನೆಯನ್ನೂ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಶಾಸಕನ ಸಹೋದರನ ಗೂಂಡಾಗಿರಿ; ಪ್ರತಿಭಟನೆ ಸಂದರ್ಭದಲ್ಲಿ ಅಡ್ಡ ಬಂದಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಹೊಡೆತ