ತಮಿಳುನಾಡಿಗೆ ಬಿಜೆಪಿ ಪರ್ಯಾಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಹೊಸೂರಿನಲ್ಲಿ ಮೊದಲ ಚುನಾವಣಾ ಪ್ರಚಾರ ಭಾಷಣವನ್ನು ಮಾಡುತ್ತಿದ್ದ ಮೋದಿ ತಮಿಳುನಾಡಿಗೆ ಪ್ರಥಮ ಬಾರಿ ಬಿಜೆಪಿ ರೂಪದಲ್ಲಿ ಪರ್ಯಾಯ ರಾಜಕೀಯ ಶಕ್ತಿ ದೊರೆತಿದೆ. ರಾಜ್ಯ ಸರ್ಕಾರ ಸಂಪೂರ್ಣವಾಗಿ ಭೃಷ್ಟಾಚಾರದಲ್ಲಿ ಮುಳುಗಿದೆ ಮತ್ತು ಇದರಲ್ಲಿ ಅವರಿಗೆ ನಾಚಿಕೆ ಎನ್ನುವುದು ಇಲ್ಲ ಎಂದು ಪ್ರಧಾನಿ ಟೀಕಿಸಿದ್ದಾರೆ.
ಈ ಬಾರಿಯ ತಮಿಳುನಾಡು ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಮುಖ್ಯವಲ್ಲ, ಯಾರು ತಮಿಳುನಾಡನ್ನು ರಕ್ಷಿಸುತ್ತಾರೆ ಎನ್ನುವುದು ಮಹತ್ವದ್ದು ಎಂದು ಅವರು ಹೇಳಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಚೆನ್ನೈಯನ್ನು ಬಾಧಿಸಿದ ಪ್ರವಾಹವನ್ನು ಉಲ್ಲೇಖಿಸಿದ ಅವರು ಆ ಸಂಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಿದವರು ಬಿಜೆಪಿ ಕಾರ್ಯಕರ್ತರು ಎಂದಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎರಡು ವರ್ಷಗಳಿಂದ ಅಧಿಕಾರದಲ್ಲಿದೆ. ಆದರೆ ಇಲ್ಲಿಯವರೆಗೆ ಯಾವುದೇ ಭೃಷ್ಟಾಚಾರದ ಆರೋಪವನ್ನು ತಗಲಿಸಿಕೊಂಡಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.