Select Your Language

Notifications

webdunia
webdunia
webdunia
webdunia

ಬಟ್ಟೆ ಕಾರ್ಖಾನೆಗೆ ಬೆಂಕಿ ಬಿದ್ದು ಮೂವರು ಸಜೀವ ದಹನ

ಬಟ್ಟೆ ಕಾರ್ಖಾನೆ
ಲುದಿಯಾನಾ , ಶನಿವಾರ, 7 ಮೇ 2016 (14:55 IST)
ಪಂಜಾಬ್‌ನ ಬಟ್ಟೆ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಮೂರು ಜನ ಕಾರ್ಮಿಕರು ಸಜೀವವಾಗಿ ದಹನವಾಗಿದ್ದಾರೆ.

ಲುದಿಯಾನಾದ ಬಾಜರಾಪಿಂಡ್‌ನ ರಹೋನ್ ರಸ್ತೆಯಲ್ಲಿರುವ ಜ್ಞಾನಚಂದ್ & ಸನ್ಸ್ ಎಂಬ ಬಟ್ಟೆ ಕಾರ್ಖಾನೆಯಲ್ಲಿ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಈ ಅವಘಡ ನಡೆದಿದೆ.
 
ಬೆಂಕಿ ಹಬ್ಬುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ 11 ಅಗ್ನಿಶಾಮಕ ವಾಹನಗಳು ಸತತ 6 ಗಂಟೆ ಪ್ರಯತ್ನ ನಡೆಸಿ ಬೆಂಕಿ ನಂದಿಸುವಲ್ಲಿ ಯಶ ಕಂಡಿದ್ದಾರೆ. ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. 
 
ಮೃತ ಕಾರ್ಮಿಕರು ರಾತ್ರಿ ಅಲ್ಲಿಯೇ ಮಲಗಿದ್ದರೆಂದು ತಿಳಿದು ಬಂದಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆ ಬೆಂಕಿಗೆ ಆಹುತಿಯಾಗಿದೆ ಎಂದು ಲೂಧಿಯಾನ ಡಿಸಿಪಿ ಧರ್ಮನ್ ನಿಂಬಾಳೆ ಹೇಳಿದ್ದಾರೆ. 
 
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಉತ್ತರ ಕೊರಿಯಾದಿಂದ ಐದನೇ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ