ಉತ್ತರ ಕೊರಿಯಾ ಮುಂದಿನ ಭವಿಷ್ಯದಲ್ಲಿ ಐದನೇ ಪರಮಾಣು ಪರೀಕ್ಷೆಯನ್ನು ನಡೆಸುವ ಸಿದ್ಧತೆ ನಡೆಸಿದೆ ಎಂದು ಅಮೆರಿಕದ ಚಿಂತಕರ ಚಾವಡಿ ಶುಕ್ರವಾರ ತಿಳಿಸಿದೆ. ದೇಶದ ಪರಮಾಣು ಪರೀಕ್ಷೆ ಸ್ಥಳದಲ್ಲಿ ವಾಣಿಜ್ಯ ಉಪಗ್ರಹ ಚಿತ್ರಗಳನ್ನು ಆಧರಿಸಿ ಚಿಂತಕರ ಚಾವಡಿ ಈ ಅಭಿಪ್ರಾಯ ಹೊಂದಿದೆ.
ಜಾನ್ ಹಾಪ್‌ಕಿನ್ಸ್ ವಿವಿಯ ಶಾಲೆ ನಡೆಸುವ 38 ನಾರ್ತ್ ವೆಬ್‌ಸೈಟ್ ಚಿತ್ರಗಳಲ್ಲಿ ವಾಹನಗಳ ಚಲನವಲನವನ್ನು ತೋರಿಸಿದ್ದು, ಪರೀಕ್ಷೆಗೆ ಸಿದ್ಧತೆ ನಡೆಸುವ ಸಂದರ್ಭಗಳಲ್ಲಿ ಹೊರತುಪಡಿಸಿ ಬೇರೆ ಸಂದರ್ಭಗಳಲ್ಲಿ ವಾಹನ ಚಲನವಲನ ಕಾಣುವುದಿಲ್ಲ ಎಂದು ತಿಳಿಸಿದೆ.
ಆಡಳಿತಾರೂಢ ಕಾರ್ಮಿಕರ ಪಕ್ಷದ ಸಮಾವೇಶದ ಸಂದರ್ಭದಲ್ಲಿ ಉತ್ತರ ಕೊರಿಯಾ ಐದನೇ ಅಣ್ವಸ್ತ್ರ ಪರೀಕ್ಷೆ ನಡೆಸುತ್ತದೆಂಬ ಊಹಾಪೋಹ ದಟ್ಟವಾಗಿದೆ.
38 ನಾರ್ತ್ ವಿಶ್ಲೇಷಣೆಯಲ್ಲಿ ಪುಂಗ್ಯೆ-ರಿ ಟೆಸ್ಟ್ ಸೈಟ್‌ನಲ್ಲಿನ ಚಿತ್ರವು ಉತ್ತರಕೊರಿಯಾ ಮುಂದಿನ ಭವಿಷ್ಯದಲ್ಲಿ ಅಣ್ವಸ್ತ್ರ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರಬಹುದೆಂದು ತೋರಿಸಿದೆ.