ಮುಂದಿನ ವರ್ಷ ದೇಶದ ರಾಷ್ಟ್ರೀಯ ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ಗ್ರೇಡ್ 12 ವಿದ್ಯಾರ್ಥಿಗಳ ಜತೆ ಚೀನಾದ ರೊಬೊಟ್ ಒಂದು ಸ್ಪರ್ಧೆಗಿಳಿದಿದ್ದು, ಮೊದಲ ದರ್ಜೆ ವಿವಿಗೆ ಅರ್ಹತೆ ಪಡೆಯಲು ಯತ್ನಿಸಿದೆ. ಈ ರೊಬೊಟ್ ಗಣಿತ, ಚೈನೀಸ್ ಮತ್ತು ಲಿಬರಲ್ ಆರ್ಟ್ಸ್ ಸಮಗ್ರ ಪರೀಕ್ಷೆಯಲ್ಲಿ ಕಾಣಿಸಿಕೊಂಡಿದ್ದು, ಇತಿಹಾಸ, ರಾಜಕೀಯ ಮತ್ತು ಭೂಗೋಳ ಕೂಡ ಅದರಲ್ಲಿ ಒಳಗೊಂಡಿದೆ.
ರೊಬೋಟ್ ಮುಚ್ಚಿದ ಕೊಠಡಿಯಲ್ಲಿ ಪರೀಕ್ಷೆ ತೆಗೆದುಕೊಳ್ಳಲಿದ್ದು, ಮೇಲ್ವಿಚಾರಕ ಮತ್ತು ನೋಟರಿ ಮಾತ್ರ ಉಪಸ್ಥಿತರಿರಲಿದ್ದಾರೆ. ಪ್ರತಿಯೊಂದು ಪರೀಕ್ಷೆಗೆ ಮುನ್ನ ರೊಬೊಟ್ ಅನ್ನು ಪ್ರಿಂಟರ್‌ಗೆ ಜೋಡಿಸಲಾಗುತ್ತದೆ. ವಿದ್ಯುನ್ಮಾನ ಪರೀಕ್ಷಾ ಪತ್ರಿಕೆಯನ್ನು ರೋಬೋಟ್ ಪ್ರೋಗ್ರಾಂಗೆ ತುಂಬಲಾಗುತ್ತದೆ ಎಂದು ಕೃತಕ ಬುದ್ಧಿಮತ್ತೆ ಕಂಪನಿಯ ಸಿಇಒ ಲಿನ್ ಹುಯಿ ತಿಳಿಸಿದ್ದಾರೆ.
ರೊಬೊಟ್ ಗೆ ಸಂಪೂರ್ಣವಾಗಿ ಅಂತರ್ಜಾಲದ ಸಂಪರ್ಕ ತೆಗೆಯಲಾಗುತ್ತದೆ ಮತ್ತು ಕೃತಕ ಬುದ್ಧಿಮತ್ತೆ ಕಾರ್ಯಕ್ರಮದ ಮೂಲಕ ಸಮಸ್ಯೆಗಳನ್ನು ಬಿಡಿಸುತ್ತದೆ ಎಂದು ಚೀನಾ ದಿನಪತ್ರಿಕೆ ತಿಳಿಸಿದೆ. ರೋಬೊಟ್ ಬರವಣಿಗೆ ತಂತ್ರವು ಇಂದಿನ ದಿನಗಳಲ್ಲಿ ಪರಿಪಕ್ವವಾಗಿದೆ. ರೊಬೊಟ್ ಬರವಣಿಗೆ ಸೆಷನ್ ವಿಷಯವನ್ನು ವಿಶ್ಲೇಷಿಸಿ ಬರವಣಿಗೆಯನ್ನು ಸಂಪೂರ್ಣಗೊಳಿಸುತ್ತದೆ ಎಂದು ಲಿನ್ ಹೇಳಿದ್ದಾರೆ.