ನೀವು ಸಿನಿಮಾ ರಸಿಕರೇ? ನಿಮ್ಮ ಉತ್ತರ ಹೌದು ಎಂದಾದರೆ, "ಫಾಸ್ಟ್‌ಫಿಲ್ಮ್" ಹೆಸರಿನ ಅಪ್ಲಿಕೇಶನ್ ನಿಮ್ಮ ಜೀವನವನ್ನೆ ಬದಲಾಯಿಸಲಿದೆ. ಈ ಹೊಸ ವೈಶಿಷ್ಟ್ಯದ ಅಪ್ಲಿಕೇಶನ್ ಪ್ರಾದೇಶಿಕ ಸಿನಿಮಾ ವಿಷಯ ಒಳಗೊಂಡ ದೊಡ್ಡ ಪಟ್ಟಿಯನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ.
"ಫಾಸ್ಟ್‌ಫಿಲ್ಮ್" ಹೆಸರಿನ ಅಪ್ಲಿಕೇಶನ್ 150 ತಮಿಳು ಚಲನಚಿತ್ರ ಒಳಗೊಂಡಿದ್ದು, ಮುಂದಿನ ತಿಂಗಳಲ್ಲಿ ಕೆಲವು ತೆಲುಗು ಸಿನಿಮಾಗಳನ್ನು ಸೇರಿಸಲು ಯೋಜಿಸುತ್ತಿದೆ.
ಬಳಕೆದಾರರು ಕೇವಲ 10 ರೂಪಾಯಿ ಪಾವತಿ ಮಾಡುವ ಮೂಲಕ ಈ ಹೊಸ ವೈಶಿಷ್ಟ್ಯದ ಅಪ್ಲಿಕೇಶನ್ ಸೇವೆಯನ್ನು ಉರಯೋಗಪಡಿಸಿಕೊಳ್ಳಬಹುದು.
ಜೊತೆಗೆ, ಬಳಕೆದಾರರು ತಿಂಗಳು ಚಂದಾ ಪಾವತಿ ಮಾಡುವ ಚಿಂತೆ ಪಡಬೇಕಿಲ್ಲ, ಕ್ಯಾರಿಯರ್ ಬಿಲ್ಲಿಂಗ್ ಬೆಂಬಲಕ್ಕಾಗಿ ಪ್ರತಿ ನಿತ್ಯ ಕೇವಲ 1 ರೂಪಾಯಿ ಪಾವತಿ ಮಾಡುವ ಮೂಲಕ ಸೇವೆಯನ್ನು ಪಡೆಯಬಹುದಾಗಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ