Select Your Language

Notifications

webdunia
webdunia
webdunia
webdunia

ದೇಶದ ಏಕತೆಗೆ ಬಿಜೆಪಿ ಧಕ್ಕೆ: ರಾಹುಲ್ ಗಾಂಧಿ ಅಪಹಾಸ್ಯ

ದೇಶದ ಏಕತೆಗೆ ಬಿಜೆಪಿ  ಧಕ್ಕೆ:   ರಾಹುಲ್ ಗಾಂಧಿ ಅಪಹಾಸ್ಯ
delhi , ಗುರುವಾರ, 2 ನವೆಂಬರ್ 2023 (14:25 IST)
ಮುಜಾಫರ್ ನಗರವಾಸಿಗಳ ಭಾವನೆಗಳಲ್ಲಿ ನನ್ನ ಅಂತರಂಗವಿತ್ತು. ಆದ್ದರಿಂದಲೇ ಬಿಜೆಪಿ ಪಕ್ಷದ ನೀತಿಗಳನ್ನು ವಿರೋಧಿಸುತ್ತೇನೆ. ಇದೀಗ ಮುಜಾಫರ್ ನಗರಕ್ಕೆ ಬೆಂಕಿ ಹಚ್ಚಿದ್ದಾರೆ. ಗುಜರಾತ್, ಉತ್ತರಪ್ರದೇಶ ಮತ್ತು ಕಾಶ್ಮೀರ ರಾಜ್ಯಗಳು ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಇದೇ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ನಾವು ಮತ್ತು ನೀವು ಇದರ ಪ್ರಭಾವವನ್ನು ಎದುರಿಸಬೇಕಾಗುತ್ತದೆ. ಇದರಿಂದಾಗಿ ದೇಶದ ಏಕತೆಗೆ ಧಕ್ಕೆಯಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
 
ಬಿಜೆಪಿ ಪಕ್ಷ ದೇಶದಲ್ಲಿ ಕೋಮುವಾದವನ್ನು ಹರಡುತ್ತಿದೆ. ಬಿಜೆಪಿ ಪಕ್ಷದ ದ್ವೇಷದ ರಾಜಕಾರಣದಿಂದಾಗಿ ದೇಶದ ಘನತೆ ಗೌರವ ಹಾಳಾಗುತ್ತಿದೆ. ತಮ್ಮ ಅಜ್ಜಿ ಮತ್ತು ತಂದೆಯಂತೆ ತಾನೂ ಕೂಡಾ ಒಂದು ದಿನ ಹತ್ಯೆಯಾಗಬಹುದು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
 
ತಮ್ಮ ಭಾವನೆಗಳನ್ನು ಪ್ರೇಕ್ಷಕರ ಮುಂದಿಟ್ಟ ರಾಹುಲ್, ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಮುಜಾಫರ್ ನಗರಕ್ಕೆ ಭೇಟಿ ನೀಡಿ ಹಿಂದೂ ಮತ್ತು ಮುಸ್ಲಿಮರನ್ನು ಮಾತನಾಡಿಸಿದಾಗ ನನ್ನ ಸ್ವಂತ ಕಥೆಯಂತೆ ಕಂಡುಬಂದಿದೆ ಎಂದರು.
 
ನನ್ನ ಅಜ್ಜಿ ಇಂದಿರಾಗಾಂಧಿ ಹತ್ಯೆಯಾದರು. ನನ್ನ ತಂದೆ ಕೂಡಾ ಹತ್ಯೆಯಾದರು. ನನ್ನನ್ನು ಕೂಡಾ ಒಂದು ದಿನ ಹತ್ಯೆ ಮಾಡಬಹುದು. ಆದರೆ, ನಾನು ಹೆದರೋಲ್ಲ. ನನ್ನ ಮನಸ್ಸಿಗೆ ತೋಚಿದ್ದನ್ನು ಹೇಳಿದ್ದೇನೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಅಪಘಾತದಲ್ಲಿ ಕರ್ನಾಟಕಕ್ಕೆ ನಂ.5 ಸ್ಥಾನ