Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ನವರು ಅವರಿಗವರೇ ಆಪರೇಷನ್ ಮಾಡ್ತಿದ್ದಾರೆ-ಅಶ್ವಥ್ ನಾರಾಯಣ್

ಕಾಂಗ್ರೆಸ್ ನವರು ಅವರಿಗವರೇ ಆಪರೇಷನ್ ಮಾಡ್ತಿದ್ದಾರೆ-ಅಶ್ವಥ್ ನಾರಾಯಣ್
bangalore , ಬುಧವಾರ, 1 ನವೆಂಬರ್ 2023 (15:00 IST)
ಆಪರೇಷನ್ ಕಮಲ ವಿಚಾರವಾಗಿ ಸಿಎಂ ಹೇಳಿಕೆ ವಿಚಾರಕ್ಕೆ ಆಶ್ವಥ್ ನಾರಾಯಣ್ ಪ್ರತಿಕ್ರಿಯಿಸಿದ್ದಾರೆ.ನಿಮಗೆ ಗೊತ್ತಿದೆ.ಬಿಜೆಪಿ ಯಾವ ಆಪರೇಷನ್ ಕೂಡ ಮಾಡ್ತಿಲ್ಲ.ಕಾಂಗ್ರೆಸ್ ನವರು ಅವರಿಗವರೇ ಆಪರೇಷನ್ ಮಾಡ್ತಿದ್ದಾರೆ.ಕಾಂಗ್ರೆಸ್ ಪಕ್ಷದಲ್ಲಿ ಅವರವರೇ ಷಡ್ಯಂತ್ರ ಮಾಡಿಕೊಳ್ತಿದ್ದಾರೆ.ಕಾಂಗ್ರೆಸ್‌ನಲ್ಲಿ ಭವಿಷ್ಯ ಇಲ್ಲ ಅನ್ನೋದು ಗೊತ್ತಾಗ್ತಿದೆ.ಐದು ಡಿಸಿಎಂ ಬೇಕು ಅನ್ನೋದು.ಅವರಲ್ಲೇ ಗೊಂದಲ‌ ಇದೆ.ಸಿದ್ದರಾಮಯ್ಯ ಅವರು ಗಮನ ಬೇರೆಡೆ ಸೆಳೆಯಲು ಅವರ ಫೇಲ್ಯೂರ್ ಡೈವರ್ಟ್ ಮಾಡೋಕೆ ಮುಂದಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
 
ಇನ್ನೂ ಅವರೇ ಹೇಳಬೇಕು ಸರ್ಕಾರ ಹೇಗೆ ಬೀಳಿಸಲು ಆಗುತ್ತೆ‌ ಅಂತ.ನಾವು ಕೇವಲ 65ಜನ ಮಾತ್ರ ಇದ್ದೇವೆ.ಆರು ತಿಂಗಳಲ್ಲಿ ಗಟ್ಟಿಯಾಗಿ ಒಂದೇ ಒಂದು ಅಭಿವೃದ್ಧಿ ಮಾಡಲಾಗಿಲ್ಲ.ಜವಾಬ್ದಾರಿಯುತವಾಗಿ ಮಾತಾಡ್ತಿದ್ದಾರೆ.ಈಗಲೇ 77 ವರ್ಷ ವಯಸ್ಸಾಗಿದೆ.ಕೀಳು ಮಟ್ಟದ ಸುಲ್ಳು ಹೇಳಿಕೆ ಕೊಡ್ತಿದ್ದಾರೆ.ಅವರ ಹಿರಿತನಕ್ಕೆ ಆಪರೇಷನ್ ಕಮಲ ಅಂತ ಹೇಳೋದು ಸರಿಯಲ್ಲ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಸಿಎಂ ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ