Select Your Language

Notifications

webdunia
webdunia
webdunia
webdunia

ಮತಗಳ್ಳತನ ಆರೋಪ ಹೊರಿಸಿದ ಕಾಂಗ್ರೆಸ್ ಗೆ ಸೋನಿಯಾ ಗಾಂಧಿ ದಾಖಲೆ ತೋರಿಸಿದ ಬಿಜೆಪಿ

Sonia Gandhi

Krishnaveni K

ನವದೆಹಲಿ , ಬುಧವಾರ, 13 ಆಗಸ್ಟ್ 2025 (14:37 IST)
ನವದೆಹಲಿ: ಚುನಾವಣಾ ಆಯೋಗ ಮತ್ತು ಕೇಂದ್ರದ ವಿರುದ್ಧ ಮತಗಳ್ಳತನ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, ಸೋನಿಯಾ ಗಾಂಧಿಯವರ ದಾಖಲೆಯೊಂದನ್ನು ತೋರಿಸಿ ತಿರುಗೇಟು ನೀಡಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ಮತಪರಿಷ್ಕರಣೆ ವಿರೋಧಿಸಿ ಕಾಂಗ್ರೆಸ್ ಭಾರೀ ಪ್ರತಿಭಟನೆ ನಡೆಸುತ್ತಿದೆ. ಕಳೆದ ಲೋಕಸಭೆ ಚುನಾವಣೆ ವೇಳೆಯೂ ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ಮತಗಳ್ಳತನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ಆದರೆ ಇದೀಗ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ. ಸೋನಿಯಾ ಗಾಂಧಿಯವರ ಹೆಸರು ಮತಪಟ್ಟಿಗೆ 1980 ರಲ್ಲಿ ಸೇರ್ಪಡೆಯಾಗಿತ್ತು. ಆಗ ಅವರು ರಾಜೀವ್ ಗಾಂಧಿಯವರನ್ನು ಮದುವೆಯಾಗಿ ದೆಹಲಿಯ ನಿವಾಸದಲ್ಲಿ ನೆಹರೂ ಕುಟುಂಬವದರೊಂದಿಗೆ ವಾಸಿಸುತ್ತಿದ್ದರು. ಆದರೆ ಆಗಿನ್ನೂ ಅವರು ಇಟೆಲಿ ನಾಗರಿಕತ್ವ ಹೊಂದಿದ್ದರು. ಹೀಗಾಗಿ ಅವರಿಗೆ ಮತ ಚಲಾಯಿಸುವ ಹಕ್ಕಿರಲಿಲ್ಲ. ಸೋನಿಯಾ ಗಾಂಧಿಗೆ ಭಾರತೀಯ ಪೌರತ್ವ ಸಿಕ್ಕಿದ್ದು 1983 ರಲ್ಲಿ. ಹಾಗಿದ್ದರೂ ಸೋನಿಯಾ ಹೆಸರನ್ನು ಮತಪಟ್ಟಿಗೆ ಸೇರಿಸಿದ್ದು ಅನ್ಯಾಯ ಅಲ್ವಾ? ಇದು ರಾಹುಲ್ ಗಾಂಧಿಗೆ ಕಾಣಿಸಿಲ್ವಾ? ಎಂದು ಅಮಿತ್ ಮಾಳ್ವಿಯಾ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

17ರಂದು ಧರ್ಮಸ್ಥಳಕ್ಕೆ ಭೇಟಿ: ಬಿ.ವೈ.ವಿಜಯೇಂದ್ರ