Webdunia - Bharat's app for daily news and videos

Install App

ಬಿಜೆಪಿ ಆದಾಯ 3,623 ಕೋಟಿ, ಖರ್ಚು 1,651 ಕೋಟಿ: ಕಾಂಗ್ರೆಸ್ಗೆ ನಷ್ಟ!

Webdunia
ಬುಧವಾರ, 11 ಆಗಸ್ಟ್ 2021 (15:07 IST)
ನವದೆಹಲಿ(ಆ.11): 2019-20ನೇ ಸಾಲಿನಲ್ಲಿ ಬಿಜೆಪಿ ಒಟ್ಟು 3,623 ಕೋಟಿ ರು. ಆದಾಯ ಗಳಿಸಿದೆ. ಇದರಲ್ಲಿ ಚುನಾವಣಾ ಬಾಂಡ್ಗಳ ಮಾರಾಟದಿಂದ 2,555 ಕೋಟಿ ರು. ಗಳಿಸಿದೆ. 2018-18ನೇ ಸಾಲಿಗೆ ಹೋಲಿಸಿದರೆ ಬಿಜೆಪಿಯ ಗಳಿಕೆ ಶೇ. 50ರಷ್ಟುಏರಿಕೆಯಾಗಿದೆ.

ಚುನಾವಣೆ ಮತ್ತು ಪ್ರಚಾರಕ್ಕೆ ಬಿಜೆಪಿ 2019-20ನೇ ಸಾಲಿನಲ್ಲಿ 1651 ಕೋಟಿ ರು.ಗಳನ್ನು ಖರ್ಚು ಮಾಡಿದೆ. ಇದರಲ್ಲಿ 2019ರಲ್ಲಿ ನಡೆದ ಲೋಕಸಭಾ ಚುನಾವಣೆಗೆ 1352 ಕೋಟಿ ರು. ಖರ್ಚು ಮಾಡಿದೆ. ಕಳೆದ ಸಾಲಿಗೆ ಹೋಲಿಸಿದರೆ ಬಿಜೆಪಿಯ ಖರ್ಚು ಶೇ.64ರಷ್ಟುಏರಿಕೆಯಾಗಿದೆ. ಜಾಹಿರಾತಿಗಾಗಿ 400 ಕೋಟಿ ರು. ಹಣವನ್ನು ಬಿಜೆಪಿ ಖರ್ಚು ಮಾಡಿದೆ.
ಇದೇ ಸಾಲಿನಲ್ಲಿ ಕಾಂಗ್ರೆಸ್ 682 ಕೋಟಿ ರು. ಆದಾಯ ಗಳಿಸಿದೆ ಮತ್ತು 998 ಕೋಟಿ ರು. ಖರ್ಚು ಮಾಡಿದೆ. ತೃಣಮೂಲ ಕಾಂಗ್ರೆಸ್ ಒಟ್ಟಾರೆ 143 ಕೋಟಿ ರು. ಆದಾಯ ಗಳಿಸಿದ್ದು 107 ಕೋಟಿ ರು. ಖರ್ಚು ಮಾಡಿದೆ. ಸಿಪಿಎಂ 156 ಕೋಟಿ ಆದಾಯ ಗಳಿಸಿದ್ದು 105 ಕೋಟಿ ವೆಚ್ಚ ಮಾಡಿದೆ. ಎನ್ಸಿಪಿ 85 ಕೋಟಿ ಆದಾಯ ಗಳಿಸಿದ್ದು 109 ಕೋಟಿ ಖರ್ಚು ಮಾಡಿದೆ. ಬಿಎಸ್ಪಿ ಆದಾಯ 58 ಕೋಟಿ ಆಗಿದ್ದು 95 ಕೋಟಿ ಖರ್ಚು ಮಾಡಿದೆ. ಸಿಪಿಐ 6.58 ಕೋಟಿ ಆದಾಯ ಗಳಿಸಿದ್ದು 6.53 ಕೋಟಿ ವೆಚ್ಚ ಮಾಡಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments