Select Your Language

Notifications

webdunia
webdunia
webdunia
webdunia

ಮೂವರು ಗಾಂಧಿಯನ್ನು ಭೇಟಿ ಮಾಡಿದ ಪ್ರಶಾಂತ್ ಕಿಶೋರ್: 2024 ಚುನಾವಣಾ ತಂತ್ರಗಾರಿಕೆ?

ಮೂವರು ಗಾಂಧಿಯನ್ನು ಭೇಟಿ ಮಾಡಿದ ಪ್ರಶಾಂತ್ ಕಿಶೋರ್: 2024 ಚುನಾವಣಾ ತಂತ್ರಗಾರಿಕೆ?
bangalore , ಬುಧವಾರ, 14 ಜುಲೈ 2021 (13:56 IST)
2024ರ ಚುನಾವಣಾ ತಂತ್ರಗಾರಿಕೆ ಹೆಣೆಯಲು ಮೂವರು ಗಾಂಧಿಗಳನ್ನು ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮಂಗಳವಾರ ರಾತ್ರಿ  ಕಾಂಗ್ರೆಸ್ ಸಂಸದರ ಭವನದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಪ್ರಶಾಂತ್ ಕಿಶೋರ್ ಭೇಟಿ ಮಾಡಿದರು.
ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜೊತೆ ಕೈ ಜೋಡಿಸಿರುವ ಪ್ರಶಾಂತ್ ಕಿಶೋರ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಂತ್ರಗಾರಿಕೆ ರೂಪಿಸುವ ಹೊಣೆ ಹೊತ್ತಿದ್ದರು. ಈ ಬಗ್ಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿತ್ತು.
ಆದರೆ ಇದೀಗ ಮೂವರು ಗಾಂಧಿಯರನ್ನು ಭೇಟಿ ಮಾತುಕತೆ ನಡೆಸಿರುವುದು ಇದು ಕೇವಲ ವಿಧಾನಸಭಾ ಚುನಾವಣಾ ತಂತ್ರರಿಕೆ ಮಾತ್ರವಲ್ಲ, ಅದಕ್ಕಿಂತ ದೊಡ್ಡದು ಅಂದರೆ 2024ರ ಲೋಕಸಭಾ ಚುನಾವಣೆಗೆ ಸಿದ್ಧತೆ ಎಂದು ಹೇಳಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಈ ವರ್ಷವೂ ವಿದ್ಯಾರ್ಥಿಗಳಿಗೆ ಪಠ್ಯ ಕಡಿತ