Select Your Language

Notifications

webdunia
webdunia
webdunia
webdunia

ಬಿಹಾರ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬಿಹಾರ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಪಾಟ್ಣಾ , ಬುಧವಾರ, 18 ಜನವರಿ 2017 (14:02 IST)
ಪ್ರಾಚಾರ್ಯ ಮತ್ತು ಮೂವರು ಶಿಕ್ಷಕರಿಂದ 12 ವರ್ಷದ ಬುದ್ಧಿ ಮಾಂದ್ಯ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಾಲಕಿಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಎಂದು ವೈದ್ಯಕೀಯ ವರದಿಯಲ್ಲಿ ಹೇಳಲಾಗಿದೆ

ಬಿಹಾರಿನ ಜೆಹಾನಾಬಾದ್ ಜಿಲ್ಲೆಯ ಕಾಕೋನಲ್ಲಿರುವ ಸರ್ಕಾರಿ ಉರ್ದು ಶಾಲೆಯಲ್ಲಿ ಓದುತ್ತಿದ್ದ ಬಾಲಕಿಯ ಮೇಲೆ ಭಾನುವಾರ ಮಧ್ಯಾಹ್ನ ಶಾಲೆಯ ಟೆರೇಸ್‌ನಲ್ಲಿ ನಾಲ್ವರು ಶಿಕ್ಷಕರು ತನ್ನ ಬುದ್ಧಿಮಾಂದ್ಯ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಅದೇ ಶಾಲೆಯ ಶಿಕ್ಷಕಿಯೋರ್ವಳು ದೂರು ನೀಡಿದ್ದಳು. ಶಾಲೆಗೆ ರಜೆ ಇದ್ದರೂ ಮುಖ್ಯಶಿಕ್ಷಕನ ಆದೇಶದಂತೆ ಅಂದು ಶಾಲೆಯನ್ನು ತೆರೆದಿಟ್ಟಿದ್ದು ಆರೋಪಕ್ಕೆ ಪುಷ್ಟಿ ನೀಡಿತ್ತು.
 
ಮುಖ್ಯ ಶಿಕ್ಷಕ ಅಜ್ಜು ಅಹಮದ್ ಮತ್ತು ಇತರ ಆರೋಪಿಗಳಾದ ರೆಹಮಾನ್, ಅಬ್ದುಲ್ ಬರಿ, ಮೊಹಮ್ಮದ್ ಶಕೌತ್ ಅವರನ್ನು ಪೊಲೀಸರು ಬಂಧಿಸಿದ್ದರು. 
 
ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇಂದು ವೈದ್ಯಕೀಯ ವರದಿ ಪೊಲೀಸರ ಕೈ ಸೇರಿದ್ದು ಅದರಲ್ಲಿ ಅತ್ಯಾಚಾರ ನಡೆದಿರುವುದನ್ನು ಅಲ್ಲಗಳೆಯಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ಮುಖ ನೋಡಿ ಜನ ವೋಟ್ ಹಾಕಲ್ಲ: ಈಶ್ವರಪ್ಪ ಟಾಂಗ್