Select Your Language

Notifications

webdunia
webdunia
webdunia
webdunia

ಯಡಿಯೂರಪ್ಪ ಮುಖ ನೋಡಿ ಜನ ವೋಟ್ ಹಾಕಲ್ಲ: ಈಶ್ವರಪ್ಪ ಟಾಂಗ್

ಯಡಿಯೂರಪ್ಪ ಮುಖ ನೋಡಿ ಜನ ವೋಟ್ ಹಾಕಲ್ಲ: ಈಶ್ವರಪ್ಪ ಟಾಂಗ್
ತುಮಕೂರು , ಬುಧವಾರ, 18 ಜನವರಿ 2017 (13:54 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನ ಮುಖ ನೋಡಿ ಜನ ವೋಟ್ ಹಾಕಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಯಡಿಯೂರಪ್ಪನ ಮುಖ ನೋಡಿ ಜನ ವೋಟ್ ಹಾಕಲ್ಲ. ಮುಖ ನೋಡಿ ವೋಟ್ ಹಾಕೋದಿದ್ರೆ ಕೆಜಿಪಿಗೆ 6 ಸೀಟು ಏಕೆ ಬರ್ತಿತ್ತು. ಬಿಜೆಪಿಯಲ್ಲಿದ್ದಾಗ ಬಿಎಸ್‌ವೈ ಸಿಂಹ ಅಂತಿದ್ರು. ಆದರೆ, ಕೆಜಿಪೆಯಲ್ಲಿ ಸಿಂಹದ ಶಕ್ತಿ ಏಕೆ ನಡೆಯಲಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.
 
ರಾಯಣ್ಣ ಬ್ರಿಗೇಡ್‌ನ ಮುಂದಿನ ನಡೆ ಕುರಿತು ಚರ್ಚೆ ನಡೆಸಲು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಸೆಡ್ಡು ಹೊಡೆದಿದ್ದಾರೆ.
 
ತೂಮಕೂರಿನ ಹೊರವಲಯದ ಊರುಕೇರೆಯಲ್ಲಿರುವ ಮಾಜಿ ಸಚಿವ ಸೊಗಡು ಶಿವಣ್ಣ ಅವರ ನಿವಾಸದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕೆ.ಎಸ್.ಈಶ್ವರಪ್ಪ ಸೇರಿದಂತೆ 80 ಹೆಚ್ಚು ನಾಯಕರು ಭಾಗಿಯಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

'ಕೈ' ಗೆ ಬಲವಾದ ಹೊಡೆತ: ಪುತ್ರ ಸಮೇತ ಬಿಜೆಪಿ ತೆಕ್ಕೆಗೆ ಮಾಜಿ ಮುಖ್ಯಮಂತ್ರಿ