ಬಿಹಾರ್ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ವಾಟ್ಸಪ್ ಮೂಲಕ 44,000 ವಿವಾಹ ಪ್ರಸ್ತಾವನೆಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.
ಕೆಟ್ಟ ರಸ್ತೆಗಳು ಸೇರಿದಂತೆ ನಾಗರಿಕರ ಸಮಸ್ಯೆಗಳನ್ನು ವಾಟ್ಸಪ್ ಮೂಲಕ ತಮಗೆ ತಲುಪಿಸುವಂತೆ ಕೋರಿ ತೇಜಸ್ವಿ ಯಾದವ್ ವಾಟ್ಸಪ್ ಸಂಖ್ಯೆ ನೀಡಿದ್ದರೂ ದೂರಿನ ಬದಲಿಗೆ ವಿವಾಹದ ಪ್ರಸ್ತಾಪಗಳು ಬಂದಿವೆ.
ಪ್ರಿಯಾ, ಅನುಪಮಾ, ಮನೀಷಾ, ಕಾಂಚನ್ ಮತ್ತು ದೇವಿಕಾ ಸೇರಿದಂತೆ ಸುಮಾರು 44,000 ಯುವತಿಯರು ಯಾದವ್ ಅವರಿಗೆ ವಿವಾಹದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.
ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ವಾಟ್ಸಪ್‌ನಲ್ಲಿ ಒಟ್ಟು 47 ಸಾವಿರ ಸಂದೇಶಗಳು ಬಂದಿದ್ದು ಅದರಲ್ಲಿ 44 ಸಾವಿರ ಸಂದೇಶಗಳು ವಿವಾಹ ಪ್ರಸ್ತಾವನೆಗಳಾಗಿವೆ. ಇತರ 3 ಸಾವಿರ ಸಂದೇಶಗಳು ರಸ್ತೆ ರಿಪೇರಿಗೆ ಸಂಬಂಧಿಸಿದ್ದಾಗಿವೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕ ಯುವತಿಯರು ತಮ್ಮ ಮೈ ಬಣ್ಣ, ಎತ್ತರ, ಸೌಂದರ್ಯ, ಮತ್ತಿತರ ವೈಯಕ್ತಿಕ ವಿಷಯಗಳನ್ನು ವಾಟ್ಸಪ್‌ನಲ್ಲಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ