ಗೋವಾ ರಾಜ್ಯದಲ್ಲಿರು ಕನ್ನಡಿಗರ ಮೇಲೆ ಗೋವಾ ಗೂಂಡಾಗಳು ಅಟ್ಟಹಾಸ ಮೇರೆದಿರುವ ಹೇಯ ಕೃತ್ಯ ನಡೆದಿದೆ.
ನಮ್ಮ ಉಡುಗೆ ತೊಡುಗೆಗಳನ್ನೇ ಅನುಸರಿಸುತ್ತಿರುವ ನೀವು, ನಾಳೆ ನೀವೇ ಗೋವಾದಲ್ಲಿ ಅಸ್ತಿತ್ವ ಸಾಧಿಸುತ್ತೀರಿ ಎಂದು ಆರೋಪಿಸಿ ಸುಮಾರು ಇನ್ನೂರು ಗಂಡಾಗಳು ಕನ್ನಡಿಗರ ಮೇಲೆ ಹಲ್ಲೆ ನಡೆಸಿ, ಕನ್ನಡದ ಯುವಕರನ್ನು ಬೆತ್ತಲೆ ಮೆರವಣೆಗೆ ಮಾಡಿ ದೌರ್ಜನ್ಯ ಎಸಗಿದ್ದಾರೆ.
ಈ ದೌರ್ಜನ್ಯದಿಂದ ಪಣಜಿಯಲ್ಲಿ ವಾಸಿಸುತ್ತಿರುವ ಅನೇಕ ಕನ್ನಡಿಗರ ಕುಟುಂಬಗಳು ಬೀದಿಗೆ ಬಂದಿದ್ದು, ಯಾವ ರಾಜಕಾರಣಿಗಳು ಇವರ ಸಹಾಯಕ್ಕೆ ಬಾರದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ನಮ್ಮ ಮೇಲೆ ಸುಮಾರು ಇನ್ನೂರು ಗೂಂಡಾಗಳು ದಾಳಿ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡದರು ಸಹ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ ಎಂದು ಗೋವಾ ಕನ್ನಡಿಗರು ಆರೋಪಿಸಿದ್ದಾರೆ.
ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯದ ಸಿಎಂಗಳ ಸಭೆ ಕರೆದು ವಿವಾದ ಇತ್ಯರ್ಥವಾಗುವ ಮುನ್ನವೇ ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಿದ್ದು, ಮಹದಾಯಿ ವಿವಾದಕ್ಕೂ ಕನ್ನಡಿಗರ ಮೇಲೆ ನಡೆದಿರುವ ದೌರ್ಜನ್ಯಕ್ಕೂ ಸಂಬಂಧವಿದೆ ಎಂದು ಹೇಳಲಾಗುತ್ತಿದೆ.
ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆದಿರುವುದನ್ನು ವಿರೋಧಿಸಿ ಬೆಳಗಾವಿಯ ಕಿತ್ತೂರ್ ರಾಣಿ ಚೆನ್ನಮ್ಮ ವೃತ್ತದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ