Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ವಿದೇಶ ಪ್ರವಾಸವನ್ನು ಟೀಕಿಸಿದ ಸಿಎಂ ನಿತೀಶ್ ಕುಮಾರ್

ಪ್ರಧಾನಿ ಮೋದಿ ವಿದೇಶ ಪ್ರವಾಸವನ್ನು ಟೀಕಿಸಿದ ಸಿಎಂ ನಿತೀಶ್ ಕುಮಾರ್
ಪಾಟ್ನಾ , ಶನಿವಾರ, 16 ಜುಲೈ 2016 (15:33 IST)
ಪ್ರಧಾನಮಂತ್ರಿ ನರೇಂದ್ರ ನಿರಂತರ ವಿದೇಶ ಪ್ರವಾಸಗಳಿಗೆ ತೆರಳುತ್ತಿರುವುದು, ಎನ್‌ಡಿಎ ಸರಕಾರದ ಎರಡು ವರ್ಷಗಳ ಅವಧಿ ಮುಕ್ತಾಯಗೊಳಿಸಿದ ಸಂಭ್ರಮವನ್ನು ಆಚರಿಸುತ್ತಿರುವುದರ ವಿರುದ್ಧ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಟೀಕಾ ಪ್ರಹಾರ ನಡೆಸಿದ್ದಾರೆ.
 
ವಿಶ್ವ ಯುವ ಕೌಶಲ್ಯ ದಿನಾಚರಣೆ ಅಂಗವಾಗಿ ಕಾರ್ಮಿಕ ಸಂಪನ್ಮೂಲ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಮೌನವಾಗಿ ಕೆಲಸ ಮಾಡುವುದನ್ನು ಇಷ್ಟಪಡುತ್ತೇನೆ. ವಿದೇಶ ಪ್ರವಾಸಗಳಲ್ಲಿ ನನಗೆ ಆಸಕ್ತಿಯಿಲ್ಲ ಎಂದು ಮೋದಿ ಹೆಸರನ್ನು ಹೇಳದೆ ವಾಗ್ದಾಳಿ ನಡೆಸಿದರು.
 
ಹಿಂದಿನ ಘಟನೆಗಳನ್ನು ಮೆಲಕು ಹಾಕಿದ ನಿತೀಶ್, ನಾನು ಲೋಕಸಭಾ ಸದಸ್ಯನಾಗಿದ್ದಾಗ ವಿದೇಶಕ್ಕೆ ಒಂದು ತಿಂಗಳ ಪ್ರವಾಸಕ್ಕಾಗಿ ತೆರಳುವ ಅವಕಾಶ ದೊರೆತಿತ್ತು. ಆದರೆ, ನಾನು ಗೌರವಯುವಾಗಿಯೇ ನಿರಾಕರಿಸಿದೆ ಎಂದು ಮೋದಿಗೆ ತಿರುಗೇಟು ನೀಡಿದರು.
 
ಜನಪ್ರಿಯ ವಿದೇಶಗಳಿಗೆ ತೆರಳುವಾಗ ದುಬಾರಿ ಬೆಲೆಯ ಬಟ್ಟೆಗಳನ್ನು ಧರಿಸಬೇಕಾಗುತ್ತದೆ. ಅಲ್ಲಿನ ಆಹಾರಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಸಾಮಾನ್ಯವಾಗಿ ವಿದೇಶಕ್ಕೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತೇನೆ ಎಂದರು.
 
ಸರಕಾರದ ಸಾಥ್ ನಿಶ್ಚಯ್ ಕಾರ್ಯಕ್ರಮ ಕುರಿತಂತೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅದೊಂದು ಜುಮಲಾ ಎಂದು ಕರೆದಿರುವುದಾಗಿ ಲೇವಡಿ ಮಾಡಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜ್ಬುಲ್ ಉಗ್ರ ಬುರ್ಹಾನ್ ವನಿಯನ್ನು ಹುತಾತ್ಮ ಎಂದು ಘೋಷಿಸಿದ ಪಾಕಿಸ್ತಾನ