Webdunia - Bharat's app for daily news and videos

Install App

72 ವರ್ಷದ ವೃದ್ಧೆಗೆ ಮದುವೆಯ ಆಸೆ ತೋರಿಸಿ ಬರೋಬ್ಬರಿ ₹57 ಲಕ್ಷ ಪಂಗನಾಮ ಹಾಕಿದ ಭೂಪ

Sampriya
ಬುಧವಾರ, 28 ಮೇ 2025 (14:35 IST)
Photo Courtesy X
ಥಾಣೆ: 73 ವರ್ಷದ ಮಹಿಳೆಗೆ ಮದುವೆ ಆಸೆ ತೋರಿಸಿ ವ್ಯಕ್ತಿಯೊಬ್ಬ ಬರೋಬ್ಬರಿ ₹ 57 ಲಕ್ಷ ಪಂಗನಾಮ ಹಾಕಿದ ಕುರಿತು ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ದೂರು ದಾಖಲಾಗಿದೆ.

ಪತ್ರಿಕೆಯಲ್ಲಿ ವೈವಾಹಿಕ ಜಾಹೀರಾತು ನೀಡಿದ್ದ 62 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದ ಸಂತ್ರಿಸ್ತೆ ಮೋಸ ಹೋಗಿದ್ದಾರೆ. ಡೊಂಬಿವ್ಲಿ ಪ್ರದೇಶದ ನಾನಾ ಶಂಕರ್‌ಶೇತ್ ರಸ್ತೆಯಲ್ಲಿರುವ ವಸತಿ ಸೊಸೈಟಿಯ ನಿವಾಸಿಯಾಗಿರುವ ಸಂತ್ರಸ್ತೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಆರೋಪಿಯು ಮಹಿಳೆಯ ವಿಶ್ವಾಸ ಗಳಿಸಿದ ನಂತರ, ಪುಣೆಯಲ್ಲಿ ಮದುವೆ ಮತ್ತು ಶಾಂತಿಯುತ ಜೀವನ ನಡೆಸುವ ಭರವಸೆ ನೀಡಿದ್ದಾರೆ. ಈಗ ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಪೊಲೀಸರು ಸೋಮವಾರ ಆ ವ್ಯಕ್ತಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

ಪುಣೆಯಲ್ಲಿ ಮನೆ ಖರೀದಿಸುವ ಉದ್ದೇಶ ಹೊಂದಿರುವುದಾಗಿ ಆ ವ್ಯಕ್ತಿ ಸಂತ್ರಸ್ತೆ ಮಹಿಳೆಗೆ ತಿಳಿಸಿದ್ದು, ಅದಕ್ಕಾಗಿ ₹35 ಲಕ್ಷ  ವರ್ಗಾಯಿಸುವಂತೆ ಮನವೊಲಿಸಿದ್ದಾರೆ. ಅಲ್ಲದೆ ಆಕೆಯನ್ನು ನಂಬಿಸಲು ನಕಲಿ ರಶೀದಿಗಳು ಮತ್ತು ನಕಲಿ ಆಸ್ತಿ ದಾಖಲೆಗಳನ್ನು ನೀಡಿದ್ದಾರೆ. ತಾತ್ಕಾಲಿಕವಾಗಿ ಮಹಿಳೆಯ ಮನೆಯಲ್ಲಿ ವಾಸಿಸಿದ ನಂತರ, ಆರೋಪಿಯು ಆಕೆಯ ಸುಮಾರು ₹20 ಲಕ್ಷ  ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದಾನೆ ಎಂದು ಆರೋಪಿಸಲಾಗಿದೆ.

ಆಕೆಯ ಡೆಬಿಟ್ ಕಾರ್ಡ್ ಅನ್ನು ಸಹ ಕದ್ದು, ಅದನ್ನು ಬಳಸಿಕೊಂಡು ₹2.4 ಲಕ್ಷ ರೂ.ಗಳನ್ನು ಡ್ರಾ ಮಾಡಿದ್ದಾನೆ. ಕಳೆದ ತಿಂಗಳು ಮಹಿಳೆಯಿಂದ ಹಣ ಪಡೆದು ವಂಚಿಸಿದ ನಂತರ, ಆರೋಪಿ ಕಣ್ಮರೆಯಾಗಿದ್ದು, ಪ್ರಸ್ತುತ ಪತ್ತೆಯಾಗಿಲ್ಲ ಎಂದು  ಎಂದು ವಿಷ್ಣು ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿವೇಕ್ ಕುಮುತ್ಕರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರಹ್ಮಾವರ: ಗಂಡ ಕೋರ್ಟ್ ವಿಚಾರಣೆಗೆ ಹಾಜರು, ಇತ್ತ ಮಗುವನ್ನು ಕೊಂದು ಪತ್ನಿ ಆತ್ಮಹತ್ಯೆ

ಬೀದಿನಾಯಿಗಳು ನನಗೆ ಪ್ರಪಂಚದಾದ್ಯಂತ ಖ್ಯಾತಿ ತಂದುಕೊಟ್ಟಿತು: ಜಡ್ಜ್‌ ವಿಕ್ರಮ್ ನಾಥ್ ಹಾಸ್ಯ ಚಟಾಕಿ

ಉಪರಾಷ್ಟ್ರಪತಿ ನಿವಾಸ ಖಾಲಿ ಮಾಡಿದ ಜಗದೀಪ್ ಧಂಖರ್‌, ಹೋಗಿದ್ದೆಲ್ಲಿ ಗೊತ್ತಾ

ಮೊಮ್ಮಕ್ಕಳಾಡಿಸಿರುವ 55ನೇ ವಯಸ್ಸಿನ ಮಹಿಳೆ 17ನೇ ಮಗುವಿಗೆ ಜನ್ಮ, ಗ್ರಾಮವೇ ಶಾಕ್‌

ಧರ್ಮಸ್ಥಳ ಚಲೋ ಹಗುರವಾಗಿ ತೆಗೆದುಕೊಳ್ಳದಿರಿ: ವಿಜಯೇಂದ್ರ ಎಚ್ಚರ

ಮುಂದಿನ ಸುದ್ದಿ
Show comments