Publish Date: Sun, 19 Sep 2021 (14:00 IST)
Updated Date: Sun, 19 Sep 2021 (13:03 IST)
ಭಾರತ್ ಪ್ರೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಇಲ್ಲಿ ಅಪ್ರೆಂಟಿಸ್ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಇಚ್ಛಿಸುವವರು ರಾಷ್ಟ್ರಿಯ ಅಪ್ರೆಂಟಿಶಿಪ್ ತರಬೇತಿ ಯೋಜನೆಯ www. mhrdnats.gov.in. ವೆಬ್ ಸೈಟ್ ಲಾಗಿನ್ ಆಗಬಹುದು ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಸಲ್ಲಿಸುವವರಿಗೆ ಸೆಪ್ಟೆಂಬರ್ 24, 2021 ಕೊನೆ ದಿನ ಎಂದು ತಿಳಿಸಿದೆ. ಕಂಪನಿಯಲ್ಲಿ 87 ಹುದ್ದೆ ಖಾಲಿಯಿದ್ದು, ಇದರಲ್ಲಿ 42 ಪದವೀಧರ ಅಪ್ರೆಂಟಿಸ್ ಹುದ್ದೆ ಹಾಗೂ 45 ತಂತ್ರಜ್ಞ ಅಪ್ರೆಂಟಿಸ್ ಹುದ್ದೆಯದಾಗಿರುತ್ತದೆ. ಪದವೀಧರ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಮೊದಲ ದರ್ಜೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು ಹಾಗೂ ತಂತ್ರಜ್ಞ ಅಪ್ರೆಂಟಿಸ್ ಹುದ್ದೆ ಸಲ್ಲಿಸುವವರು ಇಂಜಿನಿಯರಿಂಗ್
ಡಿಪ್ಲೋಮದಲ್ಲಿ ಕನಿಷ್ಠ ಶೇ 60 ಅಂಕಗಳನ್ನು ಪಡೆದಿರಬೇಕು. ಅರ್ಜಿ ಸಲ್ಲಿಸುವವರ ವಯಸ್ಸು 27ಕ್ಕೆ ಮೀರಿರಬಾರದು, ಮೀಸಲಾತಿ ಹೊಂದಿದವರಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಇರಲಾಗುತ್ತದೆ. ಇವರುಗಳ ಆಯ್ಕೆ ಅರ್ಹತಾ ಪರೀಕ್ಷೆ ಮತ್ತು ಸಂದರ್ಶನ ಮಾಡಿ ತೀರ್ಮಾನಿಸಲಾಗುತ್ತದೆ.
ಉದ್ಯೋಗಾಕಾಂಕ್ಷಿಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು, ದೇಶದ ಅತ್ಯನ್ನತ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಳ್ಳಲು ಸುಯೋಗವಾಗಿದೆ.