Select Your Language

Notifications

webdunia
webdunia
webdunia
webdunia

ದೈನಂದಿನ ಜೀವನದ ಭಾಗವಾಗಲಿ ಯೋಗ : ಮೋದಿ

ದೈನಂದಿನ ಜೀವನದ ಭಾಗವಾಗಲಿ ಯೋಗ : ಮೋದಿ
ನವದೆಹಲಿ , ಭಾನುವಾರ, 12 ಜೂನ್ 2022 (14:29 IST)
ನವದೆಹಲಿ : ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದು,

ಅಂದು ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಸಾವಿರಾರು ಮಂದಿ ಯೋಗ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಯೋಗ ದಿನಕ್ಕೆ ಸಂದೇಶ ನೀಡಿದ್ದು, ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಂಬರುವ ದಿನಗಳಲ್ಲಿ ವಿಶ್ವವೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಿದೆ. ಈ ದಿನವನ್ನು ಆಚರಿಸುವ ಮೂಲಕ ಯೋಗ ನಿಮ್ಮ ದೈನಂದಿನ ಜೀವನದ ಭಾಗವಾಗಿ ಅಳವಡಿಸಿಕೊಳ್ಳಬೇಕು. ಏಕೆಂದರೆ ಇದರಲ್ಲಿ ಹಲವು ಪ್ರಯೋಜನಗಳಿವೆ ಎಂದೂ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಈ ಬಾರಿ ಪ್ರತಿಯೊಬ್ಬರೂ ಯೋಗ ದಿನವನ್ನು ಆಚರಿಸಬೇಕು. ಅದಕ್ಕಾಗಿ ನಿಮ್ಮ ನಗರ, ಪಟ್ಟಣ ಅಥವಾ ಹಳ್ಳಿಯಲ್ಲಿನ ಯಾವುದಾರೂ ವಿಶೇಷ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಅದು ಪುರಾತನ ದೇವಾಲಯವಾಗಿರಬಹುದು, ಪ್ರವಾಸಿ ಕೇಂದ್ರವಾಗಿರಬಹುದು ಅಥವಾ ಪ್ರಸಿದ್ಧ ನದಿಯ ತಪ್ಪಲಾಗಿರಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರದದಲ್ಲೇ ನೀರೋಳಗೆ ಸಾಗಬಲ್ಲ ಡ್ರೋನ್