Bakrid: ಅಲ್ಲಾಹನಿಗಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ವ್ಯಕ್ತಿ

Sampriya
ಭಾನುವಾರ, 8 ಜೂನ್ 2025 (16:21 IST)
Photo Courtesy X
ಉತ್ತರ ಪ್ರದೇಶ: ಇಲ್ಲಿನ 60 ವರ್ಷದ ವ್ಯಕ್ತಿಯೊಬ್ಬರು ಬಕ್ರೀದ್ ದಿನದಂದು ಅಲ್ಲಾಹನಿಗೆ ಬಲಿದಾನವಾಗಿ ಕತ್ತು ಸೀಳಿಕೊಂಡು ದೇಹತ್ಯಾಗ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. 

ತಮ್ಮ ಕತ್ತನ್ನು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನಾ ಬರೆದುಕೊಂಡಿರುವ ಪತ್ರ ವೈರಲ್ ಆಗಿದೆ. ಅದರಲ್ಲಿ ನನ್ನ ಬಲಿದಾನ ಅಲ್ಲಾಹನಿಗಾಗಿ ಎಂದು ಬರೆದಿದ್ದಾರೆ.

ಮೃತ ವ್ಯಕ್ತಿ ಇಶ್ ಮೊಹಮ್ಮದ್ ಅನ್ಸಾರಿ ಎಂದು ಗುರುತಿಸಲಾಗಿದೆ.  ಶನಿವಾರ ಬೆಳಿಗ್ಗೆ ತನ್ನ ಮನೆಯ ಪಕ್ಕದ ಗುಡಿಸಲಿನಲ್ಲಿ ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. 

ಅವನ ಕೂಗು ಕೇಳಿ ಆತನ ಕುಟುಂಬ ಸದಸ್ಯರು ಸ್ಥಳಕ್ಕೆ ಧಾವಿಸಿ ಪೊಲೀಸರ ಸಹಾಯದಿಂದ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು. ನಂತರ ಆತನನ್ನು ಗೋರಖ್‌ಪುರ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು, ಅಲ್ಲಿ ಆತ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ. 

ಈದ್ ಪ್ರಾರ್ಥನೆ ಸಲ್ಲಿಸಿದ ನಂತರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಸುಲ್ತಾನ್ ಸೈಯದ್ ಮಖ್ದೂಮ್ ಅಶ್ರಫ್ ಶಾ ಅವರ ದರ್ಗಾದಿಂದ ಹಿಂತಿರುಗಿದ್ದರು ಎಂದು ಅವರ ಕುಟುಂಬ ತಿಳಿಸಿದೆ.

ಮನೆಗೆ ಹಿಂದಿರುಗಿದ ನಂತರ, ಅನ್ಸಾರಿ ನೇರವಾಗಿ ಅವರ ಮನೆಯ ಪಕ್ಕದ ಗುಡಿಸಲಿಗೆ ಹೋದರು" ಎಂದು ಅವರ ಪತ್ನಿ ಹಜ್ರಾ ಖಾತೂನ್ ಹೇಳಿದ್ದಾರೆ.

ಸ್ಥಳದಲ್ಲಿ ಕಂಡುಬಂದ ಕೈಬರಹದ ಆತ್ಮಹತ್ಯೆ ಪತ್ರವು ಸ್ಥಳೀಯ ನಿವಾಸಿಗಳು ಮತ್ತು ಅಧಿಕಾರಿಗಳನ್ನು ದಿಗ್ಭ್ರಮೆಗೊಳಿಸಿತು. 

ಪತ್ರದಲ್ಲಿ ಹೀಗಿತ್ತು: ಮನುಷ್ಯನು ತನ್ನ ಸ್ವಂತ ಮಗುವಿನಂತೆ ಮೇಕೆಯನ್ನು ಸಾಕುತ್ತಾನೆ ಮತ್ತು ನಂತರ ಅದನ್ನು ತ್ಯಾಗ ಮಾಡುತ್ತಾನೆ. ಅದೂ ಒಂದು ಜೀವಂತ ಜೀವಿ. ನಾವು ನಮ್ಮನ್ನು ತ್ಯಾಗವಾಗಿ ಅರ್ಪಿಸಿಕೊಳ್ಳಬೇಕು. ನಾನು ಅಲ್ಲಾಹನ ಸಂದೇಶವಾಹಕರ ಹೆಸರಿನಲ್ಲಿ ನನ್ನನ್ನು ಅರ್ಪಿಸುತ್ತಿದ್ದೇನೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ವರ್ಮಾ ಅವರು, ಪ್ರಾಥಮಿಕ ತನಿಖೆಯ ಪ್ರಕಾರ ಅನ್ಸಾರಿ ಅವರೇ ಗಾಯ ಮಾಡಿಕೊಂಡಿದ್ದಾರೆ ಎಂದು ಸೂಚಿಸುತ್ತದೆ, ಆದರೆ, ನಾವು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದರು. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಂದೆಯೂ ನಾನೇ ಬಜೆಟ್ ಮಂಡಿಸುತ್ತೇನೆಂದ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ, ಡಿಕೆಶಿ ನಡುವೆ ಬಣ ಬಡಿದಾಟ ಇಲ್ವೇ ಇಲ್ಲ, ಎಲ್ಲಾ ಬಿಜೆಪಿ ಸೃಷ್ಟಿಯಂತೆ

ದುಬೈ ವೈಮಾನಿಕ ಪ್ರದರ್ಶನದಲ್ಲಿ ತೇಜಸ್ ವಿಮಾನ ಪತನ, ಫೈಲಟ್ ನಿಧನ

ಮದುವೆ ದಿನವೇ ಆಸ್ಪತ್ರೆ ಸೇರಿದ ವಧು, ವರನ ನಡೆಗೆ ಭಾರೀ ಮೆಚ್ಚುಗೆ

ಹೈಕಮಾಂಡ್‌ನಲ್ಲಿ ಕೆಲ ಶಾಸಕರ ಶಕ್ತಿಪ್ರದರ್ಶನ, ಕೊನೆಗೂ ಮೌನ ಮುರಿದ ಡಿಕೆ ಶಿವಕುಮಾರ್

ಮುಂದಿನ ಸುದ್ದಿ
Show comments