Select Your Language

Notifications

webdunia
webdunia
webdunia
webdunia

ವಿದ್ಯುತ್‌ ಕಂಬಕ್ಕೆ ಬೈಕ್‌ ಡಿಕ್ಕಿ: ಭಜರಂಗ ದಳದ ಇಬ್ಬರು ಕಾರ್ಯಕರ್ತರು ಸಾವು

bajrang dal accident shivamogga ಶಿವಮೊಗ್ಗ ಭಜರಂಗ ದಳ ಅಪಘಾತ
bengaluru , ಗುರುವಾರ, 2 ಜೂನ್ 2022 (16:27 IST)
ರಸ್ತೆ ಅಪಘಾತದಲ್ಲಿ ಭಜರಂಗ ದಳದ ಇಬ್ಬರು ಕಾರ್ಯಕರ್ತರು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಭದ್ರಾವತಿ ಜಂಕ್ಷನ್ ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ಬುಧವಾರ ರಾತ್ರಿಯ ವೇಳೆಯಲ್ಲಿ ಭದ್ರಾವತಿಯ ಜಂಕ್ಷನ್ ಸರ್ಕಲ್ ಬಳಿ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಉತ್ತಮ್ ಹಾಗೂ ಮನೋಜ್ ಗಾಯಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲ ನೀಡದೆ ಮೃತಪಟ್ಟಿದ್ದಾರೆ.
ನರಸಿಂಹರಾಜಪುರದ ಜೈಲ್ ಬಿಲ್ಡಿಂಗ್ ನಿವಾಸಿ ಉತ್ತಮ್ ಹಾಗೂ ನರಸಿಂಹರಾಜಪುರದ ಮಂಡಗದ್ದೆ ಸರ್ಕಲ್ ನಿವಾಸಿ ಮನೋಜ್ ಪಾರ್ಥಿವ ಶರೀರವನ್ನು ಭದ್ರಾವತಿಯ ಆಸ್ಪತ್ರೆಯಲ್ಲಿರಿಸಲಾಗಿದ್ದು ಮರಣೋತ್ತರ ಪರೀಕ್ಷೆಯ ನಂತರ ಮೃತ ಯುವಕರ ದೇಹವನ್ನು ನರಸಿಂಹರಾಜಪುರಕ್ಕೆ ತರಲಾಗುತ್ತದೆ. ಇಡೀ ನರಸಿಂಹರಾಜಪುರದಲ್ಲಿ ಮೌನ ಮಡುಗಟ್ಟಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾರ್ದಿಕ್‌ ಪಟೇಲ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ!‌