Select Your Language

Notifications

webdunia
webdunia
webdunia
webdunia

ಮೋದಿ ವಿರುದ್ಧ ಕೇಜ್ರಿವಾಲ್‌ ವಾಗ್ಧಾಳಿ

ಮೋದಿ ವಿರುದ್ಧ ಕೇಜ್ರಿವಾಲ್‌ ವಾಗ್ಧಾಳಿ
ನವದೆಹಲಿ , ಗುರುವಾರ, 2 ಜೂನ್ 2022 (15:35 IST)
ನವದೆಹಲಿ : ನಮ್ಮೆಲ್ಲರನ್ನೂ ಒಟ್ಟಿಗೆ ಜೈಲಿಗೆ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ಧಾಳಿ ಮಾಡಿದರು.
 
ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಸಚಿವ ಸತ್ಯಂದ್ರ ಜೈನ್ ಬಂಧನ ಕುರಿತು ಮಾತನಾಡಿದ ಅವರು, ಸಚಿವ ಸತೇಂದ್ರ ಜೈನ್ ಬಂಧನ ಬಳಿಕ ಉಪ ಮುಖಮಂತ್ರಿ ಮನೀಷ್ ಸಿಸೋಡಿಯ ಬಂಧನಕ್ಕೆ ಸುಳ್ಳು ಪ್ರಕರಣಗಳನ್ನು ಸಿದ್ದಪಡಿಸಲಾಗುತ್ತಿದೆ.

ಮನೀಶ್ ಸಿಸೋಡಿಯಾ ಅವರ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸಲು ಕೇಂದ್ರವು ಎಲ್ಲ ಏಜೆನ್ಸಿಗಳಿಗೆ ಆದೇಶಿಸಿದೆ. ಮುಂದಿನ ಬಾರಿಯೂ ದೆಹಲಿ ಸಚಿವರನ್ನೆ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಹ ನಮಗೆ ಸಿಕ್ಕಿದೆ ಎಂದು ಆರೋಪಿಸಿದರು. 

ಬಹಳಷ್ಟು ದಿನಗಳ ಹಿಂದಯೇ ನಾನು ಸತೇಂದ್ರ ಜೈನ್ ಅವರನ್ನು ಬಂಧಿಸುವ ಸಾಧ್ಯಗಳಿದೆ ಎಂದು ಹೇಳಿದ್ದೆ, ಅದರಂತೆ ಇಡಿ ಅವರನ್ನು ಬಂಧಿಸಿ ಜೂನ್ 9 ವರೆಗೂ ವಶಕ್ಕೆ ಪಡೆದುಕೊಂಡಿದೆ.

ಈಗಲೂ ಅದೇ ಮೂಲಗಳು ಡಿಸಿಎಂ ಮನೀಷ್ ಸಿಸೋಡಿಯ ವಿರುದ್ಧವೂ ಸುಳ್ಳು ಪ್ರಕರಣ ಸಿದ್ದವಾಗುತ್ತಿದೆ ಎಂದು ಹೇಳಿವೆ ಎಂದು ಆಕ್ರೋಶ ಹೊರ ಹಾಕಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆ ಆವರಣದಲ್ಲಿ ಗುಂಡಿನ ದಾಳಿ !