Select Your Language

Notifications

webdunia
webdunia
webdunia
webdunia

ಚಹಾ ಮಾಡುವವರು, ಡ್ರಮ್ಸ್ ಬಾರಿಸುವವರು ಪ್ರಧಾನಿಯಾಗಲು ಯೋಗ್ಯರು: ಆಜಂಖಾನ್

ಚಹಾ ಮಾಡುವವರು, ಡ್ರಮ್ಸ್ ಬಾರಿಸುವವರು ಪ್ರಧಾನಿಯಾಗಲು ಯೋಗ್ಯರು: ಆಜಂಖಾನ್
ಸಹರಣ್‌ಪುರ್ , ಬುಧವಾರ, 19 ಅಕ್ಟೋಬರ್ 2016 (13:52 IST)
ಚಹಾ ಮಾಡುವವರು, ಡ್ರಮ್ಸ್ ಬಾರಿಸುವವರು ದೇಶದ ಪ್ರಧಾನಿಯಾಗಲು ಯೋಗ್ಯ ವ್ಯಕ್ತಿಯಾಗಿದ್ದಾರೆ ಎನ್ನುವುದಕ್ಕೆ ಸಾಕ್ಷಿ ದೊರೆತಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಆಜಂಖಾನ್ ಎಂದಿನಂತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಪ್ರಧಾನಿ ಮೋದಿಯಂತೆ ನನಗೂ ಚಹಾ ಮಾಡಲು ಬರುತ್ತದೆ. ಡ್ರಮ್ಸ್ ಬಾರಿಸಲು ಬರುವುದರಿಂದ ನಾನು ಕೂಡಾ ಉತ್ತಮ ಪ್ರಧಾನಿಯಾಗಬಲ್ಲೆ ಎಂದು ತಮ್ಮ ಮನದಾಳವನ್ನು ಬಹಿರಂಗಪಡಿಸಿದ್ದಾರೆ. 
 
ನಾನು ಸುರಸುಂದರಾಂಗನಲ್ಲದಿದ್ದರೂ ಕುರೂಪಿಯಲ್ಲ ಮತ್ತು ಭ್ರಷ್ಟಾಚಾರಿಯಲ್ಲವಾದ್ದರಿಂದ ದೇಶದ ಉನ್ನತ ಹುದ್ದೆ ಅಲಂಕರಿಸಲು ಸೂಕ್ತ ವ್ಯಕ್ತಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
 
ಒಂದು ವೇಳೆ, ನಾನು ಪ್ರಧಾನಿಯಾದರೆ, ಕೇವಲ ಆರು ತಿಂಗಳೊಳಗಾಗಿ ದೇಶದ 120 ಕೋಟಿ ಜನತೆಯ ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂಪಾಯಿಗಳನ್ನು ಜಮಾ ಮಾಡುತ್ತೇನೆ. ನಾನು ಬೇರೆಯವರಂತೆ ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಆಜಂಖಾನ್ ವ್ಯಂಗ್ಯವಾಡಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಂದು ವಿವಾದದ ಸುಳಿಯಲ್ಲಿ ಸ್ವಯಂಘೋಷಿತ ದೇವಮಾನವಿ ರಾಧೇ ಮಾ