Select Your Language

Notifications

webdunia
webdunia
webdunia
webdunia

ಮತ್ತೊಂದು ವಿವಾದದ ಸುಳಿಯಲ್ಲಿ ಸ್ವಯಂಘೋಷಿತ ದೇವಮಾನವಿ ರಾಧೇ ಮಾ

ಮತ್ತೊಂದು ವಿವಾದದ ಸುಳಿಯಲ್ಲಿ ಸ್ವಯಂಘೋಷಿತ ದೇವಮಾನವಿ ರಾಧೇ ಮಾ
ಹರಿದ್ವಾರ್ , ಬುಧವಾರ, 19 ಅಕ್ಟೋಬರ್ 2016 (13:39 IST)
ಹರಿದ್ವಾರದಲ್ಲಿ ಪರ್ ಕಿ ಪೌಡಿ ಹಬ್ಬದ ಆಚರಣೆ ಸಂದರ್ಭದಲ್ಲಿ ಶೂ ಧರಿಸಿ ಪೂಜೆ ಮಾಡಿದ ಸ್ವಯಂಘೋಷಿತ ದೇವಮಾನವಿ ರಾಧೇ ಮಾ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
 
ಸಾಂಪ್ರದಾಯಕವಾದ ಕೆಂಪು ಸೀರೆಯನ್ನು ಧರಿಸಿ ಕೈಯಲ್ಲಿ ತ್ರಿಶೂಲ ಹಿಡಿದಿದ್ದ ರಾಧೇ ಮಾ, ಶೂ ಧರಿಸಿ ತಮ್ಮ ಭಕ್ತರೊಂದಿಗೆ ಪೂಜೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.
 
ಸ್ವಯಂ ಘೋಷಿತ ದೇವಮಾನವಿ ರಾಧೇ ಈ ಹಿಂದೆ ಕೂಡಾ ಹಲವಾರು ವಿವಾದಗಳಿಗೆ ಗ್ರಾಸವಾಗಿದ್ದಾರೆ. ಇತ್ತೀಚೆಗೆ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ವಿಚಾರಣೆ ಎದುರಿಸಿದ್ದರು.
 
ಶೂ ಧರಿಸಿ ಪೂಜೆ ಮಾಡಿದ ರಾಧೇ ಮಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಭೋಪಾಲ್‌ದ ವಕೀಲರೊಬ್ಬರು ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯದಲ್ಲಿ ಚೇತರಿಕೆ: ಅ. 27 ರಂದು ಜಯಲಲಿತಾ ಆಸ್ಪತ್ರೆಯಿಂದ ಡಿಸ್ಚಾರ್ಜ್