Publish Date: Sun, 16 Jan 2022 (07:17 IST)
Updated Date: Sun, 16 Jan 2022 (09:20 IST)
ಮುಂಬೈ : ಆನ್ಲೈನ್ನಲ್ಲಿ ಪಿಜ್ಜಾ, ಡ್ರೈ ಫ್ರೂಟ್ಸ್ ಆರ್ಡರ್ ಮಾಡುವಾಗ ಕಳೆದುಕೊಂಡ ಹಣವನ್ನು ವಾಪಾಸ್ ಪಡೆಯಲು ಪ್ರಯತ್ನಿಸಿದಾಗ ಸೈಬರ್ ವಂಚಕರು ವೃದ್ಧ ಮಹಿಳೆಗೆ 11 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಅಂಧೇರಿಯ ಉಪನಗರ ನಿವಾಸಿಯಾಗಿರುವ ಮಹಿಳೆ ಆನ್ಲೈನ್ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದರು. ಹಣವನ್ನು ತನ್ನ ಫೋನ್ನಲ್ಲಿ ಪಾವತಿಸುವಾಗ 9,999 ಕಳೆದುಕೊಂಡಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡ ವೃದ್ಧೆ ತಾನೂ ಹಣವನ್ನು ಕಳುಹಿಸಿದ ನಂಬರ್ಗೆ ಕರೆಮಾಡಿದ್ದಾಳೆ. ಆಗ ವಂಚಕ ಮಹಿಳೆಗೆ ಮೊಬೈಲ್ ಫೋನ್ನಲ್ಲೊಂದು ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಹೇಳಿದ್ದಾನೆ.
ಆಗ ಮಹಿಳೆಯ ಮೊಬೈಲ್ ಆ್ಯಕ್ಸಸ್ ಅವರಿಗೆ ಸಿಕ್ಕಿದೆ. ಆಗ ಬ್ಯಾಂಕ್ ಖಾತೆ ವಿವರ, ಪಾಸ್ವರ್ಡ್ ಕುರಿತಾದ ಎಲ್ಲಾ ಮಾಹಿತಿ ವಂಚಕರಿಸಿಗೆ ಸಿಕ್ಕಿದೆ. ವಂಚಕ 2021ರ ನ.14 ಮತ್ತು ಡಿ.1 ನಡುವೆ ಮಹಿಳೆಯ ಬ್ಯಾಂಕ್ ಖಾತೆಯಿಂದ 11.78 ಲಕ್ಷವನ್ನು ವರ್ಗಾಯಿಸಿಕೊಂಡು ಡ್ರಾ ಮಾಡಿ ವಂಚಿಸಿದ್ದಾನೆ.