Webdunia - Bharat's app for daily news and videos

Install App

ನಾಗ್ಪುರದಲ್ಲಿ ಹಿಂಸೆಗೆ ತಿರುಗಿದ ಔರಂಗಜೇಬ್ ಸಮಾಧಿ ವಿವಾದ: ಇದೊಂದು ತಪ್ಪು ಮಾಹಿತಿಯೇ ಎಲ್ಲದಕ್ಕೂ ಮೂಲ

Krishnaveni K
ಮಂಗಳವಾರ, 18 ಮಾರ್ಚ್ 2025 (12:26 IST)
Photo Credit: X
ನಾಗ್ಪುರ: ಮಹಾರಾಷ್ಟರದ ನಾಗ್ಪುರದಲ್ಲಿ ಔರಂಗಜೇಬ್ ಸಮಾಧಿ ವಿವಾದ ಹಿಂಸೆಗೆ ತಿರುಗಿದ್ದು ಘಟನೆಯಲ್ಲಿ ಹಲವು ಪೊಲೀಸರಿಗೂ ಗಾಯವಾಗಿದೆ. ಅಷ್ಟಕ್ಕೂ ಈ ಘಟನೆಗೆ ಕಾರಣವಾಗಿದ್ದು ಇದೊಂದೇ ತಪ್ಪು ಮಾಹಿತಿ ಎನ್ನಲಾಗಿದೆ.
 

ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಔರಂಗಜೇಬನ ಸಮಾಧಿಯನ್ನು ನೆಲಸಮ ಮಾಡಬೇಕು ಎಂದು ಗುಂಪೊಂದು ಪ್ರತಿಭಟನೆ ನಡೆಸಿತ್ತು. ಇದಾದ ಬಳಿಕ ಇಲ್ಲಿ ಪರಿಸ್ಥಿತಿ ಕೋಮು ಸಂಘರ್ಷವಾಗಿ ಬದಲಾಯಿತು. ಬಳಿಕ ಇದು ಹಿಂಸಾಚಾರಕ್ಕೆ ತಿರುಗಿದೆ.

ಪ್ರತಿಭಟನಾಕಾರರು ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು, ಘಟನೆಯಲ್ಲಿ ಹಲವು ಪೊಲೀಸರಿಗೂ ಗಾಯವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇಂದು ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.

ಶಾಂತವಾಗಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಪ್ರಮುಖ ಕಾರಣ ಒಂದು ಸುಳ್ಳು ಸುದ್ದಿ. ಸಮಾಧಿ ನೆಲಸಮ ಮಾಡಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದ ಗುಂಪು ಮುಸ್ಲಿಮರ ಪವಿತ್ರ ಗ್ರಂಥವನ್ನು ಸುಟ್ಟು ಹಾಕಿದೆ ಎಂಬ ವದಂತಿ ಹಬ್ಬಿತ್ತು. ಇದರ ಬೆನ್ನಲ್ಲೇ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.  ಇದೀಗ ಪೊಲೀಸರು ಸಾರ್ವಜನಿಕರು ಸುಳ್ಳು ವದಂತಿಗೆ ಕಿವಿಗೊಟ್ಟು ಶಾಂತಿ ಕದಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದು ಕುರ್ಚಿಯನ್ನೇ ಅಲುಗಾಡಿಸಿದ ಸ್ನೇಹಮಹಿ ಕೃಷ್ಣ ದಿಢೀರ್‌ ಧರ್ಮಸ್ಥಳ ಠಾಣಾ ಮೆಟ್ಟಿಲೇರಿದ್ದೇಕೆ

ಧರ್ಮಸ್ಥಳ ಕೇಸ್: ಧರ್ಮದ ಉಳಿವಿಗಾಗಿ ಬಿಜೆಪಿಯಿಂದ ಧರ್ಮದ ಯುದ್ಧ ಎಂದ ವಿಜಯೇಂದ್ರ

ಪ್ರಿಯಾಂಕ ಗಾಂಧಿ ಪ್ರತಿನಿಧಿಸುವ ವಯನಾಡಿಗೆ ರಾಜ್ಯದಿಂದ 10 ಕೋಟಿ: ನೀವು ಕೇರಳ ಸಿಎಮ್ಮಾ ಎಂದ ಆರ್ ಅಶೋಕ್

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆದ ಪೊಲೀಸರು

ಮುಂದಿನ ಸುದ್ದಿ
Show comments