Publish Date: Thu, 13 Jul 2017 (12:25 IST)
Updated Date: Thu, 13 Jul 2017 (12:28 IST)
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಎಷ್ಟು ಸಂಬಳ ಬರುತ್ತದೆ? ಹೀಗಂತ ಸುಷ್ಮಾ ಪತಿ ಮಿಜೋರಾಂ ರಾಜ್ಯ ಪಾಲ ಸ್ವರಾಜ್ ಗೆ ಯಾರೋ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಅವರು ಕೊಟ್ಟ ಪ್ರತಿಕ್ರಿಯೆ ಮಾತ್ರ ಅದ್ಭುತವಾಗಿತ್ತು.
ಸುಷ್ಮಾ ಸ್ವರಾಜ್ ಮತ್ತು ಪತಿ ಸ್ವರಾಜ್ ಇಬ್ಬರೂ ಟ್ವಿಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಸಂಕಷ್ಟದಲ್ಲಿರುವವರು ಒಂದು ಟ್ವೀಟ್ ಮಾಡಿದರೂ ಸುಷ್ಮಾ ನೆರವಿಗೆ ಧಾವಿಸುತ್ತಾರೆ. ಹೀಗಿರುವಾಗ ಸುಷ್ಮಾ ಸಂಬಳವೆಷ್ಟು ಎಂದು ಪತಿಯನ್ನು ಕೇಳಿದರೆ ಅವರು ಸುಮ್ಮನಿರುತ್ತಾರೆಯೇ?
‘ನೋಡಪ್ಪಾ ನನ್ನ ವಯಸ್ಸು ಮತ್ತು ಮೇಡಂನ ಸಂಬಳ ಎಷ್ಟೆಂದು ಕೇಳಬಾರದು. ಇದೆಲ್ಲಾ ಬ್ಯಾಡ್ ಮ್ಯಾನರ್ಸ್’ ಎಂದು ಸ್ವರಾಜ್ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಮುಂದಿನ ಟ್ವೀಟ್ ನಲ್ಲಿ ‘ಚಂದಾ ಬೇಕಿದ್ದರೆ ನೇರವಾಗಿ ಕೇಳು. ಯಾಕೆ ಸಂಬಳ ಎಷ್ಟು ಅಂತ ಕೇಳ್ತೀಯಾ’ ಎಂದು ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ