Select Your Language

Notifications

webdunia
webdunia
webdunia
webdunia

ಮಗುವಿಗೆ ವಿಷಪೂರಿತ ಚಿಪ್ಸ್ ನೀಡಿ ಕೊಂದ ಆಶಾ ಕಾರ್ಯಕರ್ತೆ

Asha Worker
ಆಂಧ್ರ ಪ್ರದೇಶ , ಸೋಮವಾರ, 30 ಅಕ್ಟೋಬರ್ 2017 (15:07 IST)
ಆಂಧ್ರ ಪ್ರದೇಶ: ಆಶಾ ಕಾರ್ಯಕರ್ತೆ ನೀಡಿದ ಚಿಪ್ಸ್ ಸೇವಿಸಿ 4 ವರ್ಷದ ಮಗು ಮೃತಪಟ್ಟಿರುವ ಘಟನೆ ಪ್ರಕಾಶಂ ಜಿಲ್ಲೆಯ ಚೀಮಕುರ್ತಿಯಲ್ಲಿ ನಡೆದಿದೆ.

ಧನಂಜಯ್(4) ಮೃತಪಟ್ಟ ಬಾಲಕ. ಪೋಷಕರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಟವಾಡಲು ಮಗುವನ್ನು ಆಶಾ ಕೇಂದ್ರದಲ್ಲಿ ಬಿಟ್ಟು ಹೋಗಿದ್ದರು. ಆದರೆ ಆಶಾ ಕಾರ್ಯಕರ್ತೆ ಜ್ಯೋತಿ, ಇಲಿ ಪಾಷಾಣ ಸೇರಿಸಿ ಚಿಪ್ಸ್ ನೀಡಿದ್ದಾಳೆ. ಧನಂಜಯ್ ಕೆಟ್ಟ ವಾಸನೆ ಬರುತ್ತಿದೆ ಬೇಡ ಎಂದರೂ, ಜ್ಯೋತಿ ಒತ್ತಾಯಪೂರ್ವಕವಾಗಿ ಮಗುವಿಗೆ ಚಿಪ್ಸ್ ತಿನ್ನಿಸಿದ್ದಾಳೆ ಎಂದು ಅಲ್ಲಿದ್ದ ಮಕ್ಕಳು ಹೇಳಿದ್ದಾರೆ.

ನಮಗೂ ಚಿಪ್ಸ್ ಬೇಕು ಎಂದು ಕೇಳಿದ್ದೆವು. ಆದರೆ ಜ್ಯೋತಿ ಮೇಡಂ ನಮಗೆ ಚಿಪ್ಸ್ ನೀಡಿಲ್ಲ. ಇದನ್ನು ನೀವು ತಿನ್ನುವಂತಿಲ್ಲ ಎಂದು ಮಕ್ಕಳು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಧನಂಜಯ್ ಸೋದರ ತರುಣ್ ಕೂಡಾ ಕಳೆದ ವರ್ಷ ಇದೇ ರೀತಿ ಸಾವನ್ನಪ್ಪಿದ್ದ. ಈ ಹಿನ್ನೆಲೆಯಲ್ಲಿ ತರುಣ್ ಸಾವಿನಲ್ಲಿ ಜ್ಯೋತಿ ಕೈವಾಡವಿತ್ತಾ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ರಕರ್ತರ ಪ್ರಶ್ನೆಗೆ ಸಿಟ್ಟಾಗಿ ಕೈಮುಗಿದು ಹೊರ ನಡೆದ ಅನುಪಮಾ ಶೆಣೈ