ಗೃಹ ಇಲಾಖೆ ಹೇಳಿಕೊಂಡ ಹಾಗೇ 2026ರಲ್ಲಿ ದೇಶ ನಕ್ಸಲ್‌ ಮುಕ್ತವಾಗುತ್ತಾ, ಇದಕ್ಕೆ ಇದೇ ಸಾಕ್ಷಿ

Sampriya
ಶುಕ್ರವಾರ, 30 ಮೇ 2025 (18:32 IST)
Photo Credit X
ಹೈದರಾಬಾದ್:  ತೆಲಂಗಾಣದ ಭದ್ರಾದ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ನಿಷೇಧಿತ ಸಿಪಿಐ ಮಾವೋವಾದಿ ಸಂಘಟನೆಯ 17 ಸದಸ್ಯರು (ನಕ್ಸಲರು) ಇಂದು ಶರಣಾಗಿದ್ದಾರೆ.

ನಕ್ಸಲ್ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದ ಇವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು. ಇದೀಗ ತೆಲಂಗಾಣ ಸರ್ಕಾರ ಕೈಗೊಂಡಿರುವ ‘ಆಪರೇಷನ್ ಚೇಯುತಾ’ ಕಾರ್ಯಕ್ರಮದಡಿ ನಕ್ಸಲರು ಶರಣಾಗತರಾಗಿದ್ದಾರೆ. ಸದ್ಯ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್‌ಪಿ ಪಿಟಿಐಗೆ ತಿಳಿಸಿದ್ದಾರೆ.

ಇದರೊಂದಿಗೆ ಈ ವರ್ಷ ಛತ್ತೀಸಗಢ, ತೆಲಂಗಾಣ, ಮಧ್ಯಪ್ರದೇಶ, ಒಡಿಶಾ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶರಣಾದ ನಕ್ಸಲರ ಸಂಖ್ಯೆ ಈ ಮೂಲಕ 282ಕ್ಕೆ ಏರಿಕೆಯಾಗಿದೆ.

ತೆಲಂಗಾಣದ ಕಾಡುಗಳಲ್ಲಿ ನಕ್ಸಲ್ ಚಲನವಲನದ ಕುರಿತು ಸ್ಥಳೀಯರು ಪೊಲೀಸರಿಗೆ ತಪ್ಪದೇ ಮಾಹಿತಿ ನೀಡಬೇಕು ಎಂದು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಇದರಿಂದ ಅಲ್ಲಿ ನಕ್ಸಲರಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಶರಣಾಗತರ ಸಂಖ್ಯೆಯೂ ಹೆಚ್ಚುತ್ತಿದೆ.

ಇತ್ತೀಚೆಗೆ ತೆಲಂಗಾಣದಲ್ಲಿ ಸ್ಥಳೀಯರು ನೀಡಿದ ಮಾಹಿತಿಯಿಂದಲೇ ಮುಲುಗು ಜಿಲ್ಲೆಯಲ್ಲಿ 21 ನಕ್ಸಲರನ್ನು ಬಂಧಿಸಲು ಸಾಧ್ಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕೇಂದ್ರ ಗೃಹ ಇಲಾಖೆ 2026 ಮಾರ್ಚ್ ಒಳಗೆ  ದೇಶ ನಕ್ಸಲ್‌ ಮುಕ್ತ ಮಾಡಲಾಗುವುದು ಎಂದು ಶಪಥ ಮಾಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಯಾಬಿನ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ, ಪೈಲಟ್ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರದಲ್ಲೇ ಆನೆ ಕಾರ್ಯಪಡೆ

ಕೇರಳದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ಭಾರೀ ಮಳೆ

ಧರ್ಮಸ್ಥಳ ಬುರುಡೆ ಪ್ರಕರಣ ಪ್ರಮುಖ ಹಂತದಲ್ಲಿರುವಾಗ ಮಹತ್ವದ ಬೆಳವಣಿಗೆ

ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

ಮುಂದಿನ ಸುದ್ದಿ
Show comments