Select Your Language

Notifications

webdunia
webdunia
webdunia
webdunia

ಬಿಜೆಪಿ ಸರ್ಕಾರವಿದ್ದಾಗ ಜಿಂದಾಲ್ ಗೆ ಭೂಮಿ ಕೊಡುವುದನ್ನು ವಿರೋಧಿಸಿದ್ದ ಸಿದ್ದರಾಮಯ್ಯ ಈಗ ತಾವೇ 3 ಸಾವಿರ ಎಕರೆ ಕೊಡಲು ಒಪ್ಪಿಗೆ

Siddaramaiah

Krishnaveni K

ಬೆಂಗಳೂರು , ಶುಕ್ರವಾರ, 23 ಆಗಸ್ಟ್ 2024 (10:09 IST)
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಜಿಂದಾಲ್ ಸಂಸ್ಥೆಗೆ ಭೂಮಿ ಕೊಡುವುದನ್ನು ವಿರೋಧಿಸಿದ್ದ ಸಿಎಂ ಸಿದ್ದರಾಮಯ್ಯ ಇಂದು ತಾವೇ ಬರೋಬ್ಬರಿ 3 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಕೊಡುವುದಕ್ಕೆ ಒಪ್ಪಿಗೆ ನೀಡಿದ್ದಾರೆ.

ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದಾಗ ಮತ್ತು ಅದಾದ ಬಳಿಕ ಬಿಜೆಪಿ ಸರ್ಕಾರವಿದ್ದಾಗ ಜಿಂದಾಲ್ ಗೆ ಭೂಮಿ ನೀಡುವ ಪ್ರಸ್ತಾಪ ಬಂದಿತ್ತು. ಆಗ ಪ್ರತಿಪಕ್ಷ ನಾಯಕರಾಗಿದ್ದ ಇದೇ ಸಿದ್ದರಾಮಯ್ಯ ಮತ್ತು ಎಚ್ ಕೆ ಪಾಟೀಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಇದರಿಂದಾಗಿ ಯೋಜನೆ ನೆನಗುದಿಗೆ ಬಿದ್ದಿತ್ತು. ವಿಶೇಷವೆಂದರೆ ಇದೀಗ ಅದೇ ಸಿದ್ದರಾಮಯ್ಯ ಸರ್ಕಾರವೇ ಜಿಂದಾಲ್ ಯೋಜನೆಗೆ ಅಸ್ತು ಎಂದಿದೆ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಿಂದಾಲ್ ಗೆ ಭೂಮಿ ನೀಡಲು ಅನುಮೋದನೆ ನೀಡಲಾಗಿದೆ. ಪ್ರತೀ ಎಕರೆಗೆ 1.50 ಲಕ್ಷ ರೂ.ನಂತೆ ಒಟ್ಟು 3,667 ಎಕರೆ ಭೂಮಿ ನೀಡಲು ಒಪ್ಪಿಗೆ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ಸಮೀಪ ಭೂಮಿ ನೀಡಲಾಗಿದೆ.

2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವಿದ್ದಾಗ ಜಿಂದಾಲ್ ಗೆ ಭೂಮಿ ಹಸ್ತಾಂತರಿಸಲು ಮುಂದಾದಾಗ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ, ಎಚ್ ಕೆ ಪಾಟೀಲ್ ಸೇರಿದಂತೆ ಕೆಲವು ನಾಯಕರು ಬಲವಾಗಿ ವಿರೋಧಿಸಿದ್ದರು. ಈ ಸಂಬಂಧ ಧರಣಿಗಳೂ ನಡೆದಿದ್ದವು. ಈಗ ಅದೇ ಜಾಗವನ್ನು ಜಿಂದಾಲ್ ಗೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರದ ಹೊಸ ಯೋಜನೆ: ತಿಂಗಳಿಗೆ 1 ಸಾವಿರ ಪಡೆಯುವುದು ಹೇಗೆ ಇಲ್ಲಿದೆ ವಿವರ