ಭಗತ್ ಸಿಂಗ್ ಜೈಲಿನಲ್ಲಿ ಬರೆದಿದ್ದ ಪತ್ರ ಬೆಂಬಲಿಗರಿಗೆ ನೀಡುತ್ತಿದ್ದರು, ಆದರೆ ನಾನು ಬರೆದ ಪತ್ರ ಸಿಗುತ್ತಿರಲಿಲ್ಲ: ಕೇಜ್ರಿವಾಲ್

Krishnaveni K
ಸೋಮವಾರ, 24 ಮಾರ್ಚ್ 2025 (08:57 IST)
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಕೆಲವು ದಿನ ತಣ್ಣಗಾಗಿದ್ದ ಮಾಜಿ ಸಿಎಂ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಈಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಬಿಜೆಪಿ ಬ್ರಿಟಿಷರಿಗಿಂತ ಕೀಳು ಎಂದಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೇರಿತ್ತು. ಸ್ವತಃ ಕೇಜ್ರಿವಾಲ್ ಹೀನಾಯ ಸೋಲುಂಡಿದ್ದರು. ಇದಾದ ಬಳಿಕ ಅವರು ಕೆಲವು ದಿನಗಳಿಂದ ತಣ್ಣಗಾಗಿದ್ದರು.

ಇದೀಗ ಮತ್ತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಕೇಜ್ರಿವಾಲ್ ಸುದ್ದಿಯಲ್ಲಿದ್ದಾರೆ. ‘ಬಿಜೆಪಿ ಆಡಳಿತವೆಂದರೆ ಬ್ರಿಟಿಷರ ಆಡಳಿತದಿಂದ ಕಡೆ. ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರ ಫೋಟೋಗಳನ್ನು ಕಿತ್ತು ಹಾಕಿತು. ನಾವು ಅಧಿಕಾರಕ್ಕೆ ಬಂದಾಗ ಈ ಫೋಟೋಗಳನ್ನು ಕಚೇರಿಯಲ್ಲಿ ಹಾಕಿದ್ದೆವು. ಆಗ ಕಾಂಗ್ರೆಸ್ ಗಾಂಧೀಜಿ ಫೋಟೋ ಯಾಕಿಲ್ಲ ಎಂದು ವಿವಾದ ಮಾಡಿತ್ತು. ಆದರೆ ಈಗ ಬಿಜೆಪಿ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಫೋಟೋ ಕಿತ್ತು ಹಾಕಿದ್ದರ ಬಗ್ಗೆ ಚಕಾರವೆತ್ತಿಲ್ಲ’ ಎಂದಿದ್ದಾರೆ.

ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಅವರು ಬರೆದ ಪತ್ರಗಳನ್ನು ಅವರ ಜೊತೆಗಾರರಿಗೆ ನೀಡಲಾಗಿತ್ತು. ಆದರೆ ನಾನು ಜೈಲಿನಲ್ಲಿದ್ದಾಗ ಬರೆದ ಪತ್ರವನ್ನು ಲೆಫ್ಟಿನೆಂಟ್ ಗವರ್ನರ್ ಗೂ ತಲುಪಿಸುತ್ತಿರಲಿಲ್ಲ. ಬಿಜೆಪಿ ಆಡಳಿತ ಬ್ರಿಟಿಷರಿಗಿಂತ ಕಡೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಬದಲಾವಣೆ ಸಾಧ್ಯನೇ ಇಲ್ಲ: ಬಸನಗೌಡ ಪಾಟೀಲ್

ಬಿಗ್ ಶಾಕ್‌, ಬಾವಿಗೆ ಹಾರಿ ಒಂದೇ ಕುಟುಂಬದ ನಾಲ್ವರು ಸಾವು

ದರೋಡೆಕೋರರ ಬೆಂಗಳೂರೇ, ಹಳ್ಳದ ಬೆಂಗಳೂರೇ, ಕಸದ ಬೆಂಗಳೂರೇ: ಆರ್.ಅಶೋಕ್

ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪಕ್ಕೆ ಕೋಲ್ಕತ್ತಾದಲ್ಲೂ ಶೇಕ್‌

ಮುನ್ಸೂಚನೆಯಂತೆ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ

ಮುಂದಿನ ಸುದ್ದಿ
Show comments