ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಪ್ ಸರ್ಕಾರ, ಸ್ವಾತಂತ್ರ್ಯೋತ್ತರ ದೆಹಲಿಯನ್ನಾಳಿದ ಅತ್ಯಂತ ಕೆಟ್ಟ ಸರ್ಕಾರ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವ್ಯಾಖ್ಯಾನಿಸಿದ್ದು, ಈ ಪಕ್ಷದ ಬಗ್ಗೆ ಜಾಗರೂಕರಾಗಿರಿ ಎಂದು ಸದ್ಯದಲ್ಲಿಯೇ ಚುನಾವಣೆಯನ್ನೆದುರಿಸುತ್ತಿರುವ ಪಂಜಾಬ್ ಜನತೆಗೆ ಎಚ್ಚರಿಸಿದ್ದಾರೆ.
ಜಲಂಧರ್‌ನಲ್ಲಿ ವರದಿಗಾರರೊಂದಿಗೆ ಮಾತನ್ನಾಡುತ್ತಿದ್ದ ಅವರು, ದೆಹಲಿ ಆಡಳಿತದ ಬಗ್ಗೆ ಗಮನವಿಟ್ಟು ನೋಡಿದರೆ, ಆಡಳಿತದ ಗುಣಮಟ್ಟ ನಮಗೆ ಅರ್ಥವಾಗುತ್ತದೆ ಎಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಪಂಜಾಬ್ ಗದ್ದುಗೆಯ ಮೇಲೆ ಕಣ್ಣಿಟ್ಟಿರುವ ಕುರಿತು ಪ್ರತಿಕ್ರಿಯಿಸಲು ಕೇಳಿದಾಗ ಅವರು ಈ ರೀತಿಯಲ್ಲಿ ಉತ್ತರಿಸಿದ್ದಾರೆ.
ಆಪ್ ಬಗ್ಗೆ ನನ್ನ ಅಭಿಪ್ರಾಯವನ್ನು ಕೇಳಿದರೆ, ಸ್ವಾತಂತ್ರ್ಯಾ ನಂತರ ದೆಹಲಿಯನ್ನಾಳಿದ ಅತ್ಯಂತ ಕೆಟ್ಟ ಸರ್ಕಾರ ಇದೆಂದು ನಾನು ಹೇಳ ಬಯಸುತ್ತೇನೆ. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಆಡಳಿತದ ಗುಣಮಟ್ಟವನ್ನು ಗಮನಿಸಿದರಷ್ಟೇ ಸಾಕು, ಇದು ಪಂಜಾಬ್ ಜನತೆಗೆ ಆ ಪಕ್ಷದಿಂದ ದೂರವಿರಿ ಎಂಬ ಎಚ್ಚರಿಕೆಯನ್ನು ನೀಡುತ್ತದೆ ಎಂದಿದ್ದಾರೆ ಜೇಟ್ಲಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .