Select Your Language

Notifications

webdunia
webdunia
webdunia
webdunia

ನಾಳೆ ಕಾರ್ಗಿಲ್ ದಿವಸ್ ಆಚರಣೆಗೆ ಸೇನೆ ಸಿದ್ಧತೆ

ಕಾರ್ಗಿಲ್ ವಿಜಯ್ ದಿವಸ್
ನವದೆಹಲಿ , ಶನಿವಾರ, 23 ಜುಲೈ 2022 (10:02 IST)
ನವದೆಹಲಿ : ನಾಳೆಯಿಂದ ಮೂರು ದಿನಗಳ ಕಾಲ ಲಡಾಖ್ನ ದ್ರಾಸ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆಗೆ ಭಾರತೀಯ ಸೇನೆ ಸಿದ್ಧತೆ ನಡೆಸಿದೆ.

ಪ್ರಮುಖ ಪರ್ವತಾರೋಹಿ, ಪದ್ಮಭೂಷಣ ಪುರಸ್ಕೃತರಾದ ಬಚ್ಚೇಂದ್ರಿಪಾಲ್ ನೇತೃತ್ವದಲ್ಲಿ ಕಳೆದ ಐದು ತಿಂಗಳಿಂದ ಸುದೀರ್ಘ ಹಿಮಾಲಯ ಯಾತ್ರೆ ನಡೆಸಿರುವ 50 ವರ್ಷ ದಾಟಿದ 12 ಮಹಿಳೆಯರ ತಂಡ ಪ್ರಮುಖ ಆಕರ್ಷಣೆ ಆಗಲಿದೆ.

ವಿಜಯ್ ದಿವಸ್ ಭಾಗವಾಗಿ ಫಿಟ್@50ಪ್ಲಸ್ ಹೆಸರಿನಲ್ಲಿ ಅರುಣಾಚಲದ ಪಾಂಗ್-ಸೌ ಕಣಿವೆಯಲ್ಲಿ ಈ ಯಾತ್ರೆ ಶುರುವಾಗಿತ್ತು. ಒಟ್ಟು 37 ಪರ್ವತಗಳನ್ನು ದಾಟಿ, 4,977 ಕಿ.ಮೀ ಪ್ರಯಾಣಿಸಿರುವ ಅವರು ನಾಳೆ ಬೆಳಗ್ಗೆ ದ್ರಾಸ್ ತಲುಪಲಿದ್ದಾರೆ. ನಾಳಿದ್ದು ಈ ತಂಡವನ್ನು ಗೌರವಿಸಲಾಗುತ್ತದೆ. 


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ!