ವಾಶ್ ರೂಂ ಅಂದ್ರೆನೇ ಬೆಚ್ಚಿ ಬೀಳ್ತಿದ್ದಾರೆ ವಿದ್ಯಾರ್ಥಿನಿಯರು?

Webdunia
ಮಂಗಳವಾರ, 20 ಸೆಪ್ಟಂಬರ್ 2022 (11:39 IST)
ಚಂಡೀಗಢ : ಮೊಹಾಲಿಯ ಚಂಡೀಗಢ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ ಪ್ರಕರಣ ಬೆಳಕಿಗೆ ಬಂದ ಬಳಿಕ ವಿದ್ಯಾರ್ಥಿನಿಯರು ಹಾಸ್ಟೆಲ್ನಲ್ಲಿ  ವಾಶ್ ರೂಂ ಬಳಸೋದಕ್ಕೂ ಹೆದರುತ್ತಿದ್ದಾರೆ.

ಹಾಸ್ಟೆಲ್ ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣವು ವ್ಯಾಪಕ ಆಕ್ರೋಶಕ್ಕೆ ಗುರಿಯಾದ ಬೆನ್ನಲ್ಲೇ ಚಂಗೀಗಢ ವಿಶ್ವವಿದ್ಯಾಲಯವನ್ನು 5 ದಿನ ಬಂದ್ ಮಾಡಲಾಗಿದೆ.

ಸೆ.24ರವರೆಗೆ ವಿವಿಯನ್ನು ಬಂದ್ ಮಾಡಲಾಗಿದೆ. ಆದರೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ವಿದ್ಯಾರ್ಥಿನಿಯರು ಭಯಭೀತರಾಗಿದ್ದು, ಹಾಸ್ಟೆಲ್ ತೊರೆದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಇನ್ನು ಇರುವ ವಿದ್ಯಾರ್ಥಿನಿಯರಂತು ಸ್ನಾನದ ಕೊಠಡಿಗಳನ್ನು ಬಳಸೋದಕ್ಕೆ ಹೆದರುತ್ತಿದ್ದಾರೆ.

ನಿನ್ನೆ ರಾತ್ರಿಯಷ್ಟೇ ವೀಡಿಯೋ ಲೀಕ್ ಮಾಡಿದ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದು, ಆಕೆಯಿಂದ ವೀಡಿಯೋ ಕಳಿಸಿಕೊಂಡಿದ್ದ ಬಾಯ್ಫ್ರೆಂಡ್ನನ್ನು ಬಂಧಿಸಲಾಗಿದೆ. ಆದರೂ ವಿದ್ಯಾರ್ಥಿಗಳ ಆಕ್ರೋಶ ಕಡಿಮೆಯಾಗಿಲ್ಲ.

ವೀಡಿಯೋ ಲೀಕ್ ಆದಾಗಿನಿಂದಲೂ ವಿದ್ಯಾರ್ಥಿನಿಯರು ವಾಶ್ರೂಂ ಗಳಲ್ಲಿ ಸ್ನಾನ ಮಾಡಲು ಹೆದರುತ್ತಿದ್ದಾರೆ. ಹಾಗಾಗಿ ಪೊಲೀಸರು ಹಾಸ್ಟೆಲ್ನಲ್ಲಿ ಹಿಡನ್ ಕ್ಯಾಮೆರಾಗಳಿವೆಯೇ ಎಂದು ಪರಿಶೀಲಿಸುತ್ತಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು: ಜಗದೀಶ್ ಶೆಟ್ಟರೆ ಆಗ್ರಹ

BB Season 12, ಧ್ರುವಂತ್ ಮಾತಿಂದ್ದ ರೊಚ್ಚಿಗೆದ್ದ ಸೂರಜ್, ಧನುಷ್, ಸ್ಪಂದನಾ

ಸಿದ್ದರಾಮಯ್ಯ ಕಾಂಗ್ರೆಸ್ಸಿಗನೂ ಅಲ್ಲ, ಜೆಡಿಎಸ್ ಅಲ್ಲ, ಅಹಿಂದ ನಾಯಕನೂ ಅಲ್ಲ: ಎಚ್ ವಿಶ್ವನಾಥ್

ಸಿದ್ದು, ಡಿಕೆಶಿ ಕುರ್ಚಿ ಕಿತ್ತಾಟದ ನಡುವೆ ಈ ಸಚಿವನಿಗೆ ಸಿಎಂ ಸ್ಥಾನ ನೀಡಬೇಕೆಂದ ಮುನಿ ಸ್ವಾಮೀಜಿ

ದೆಹಲಿ ನಮ್ಮ ದೇವಸ್ಥಾನ, ಸಿಎಂ ಕುರ್ಚಿ ಕಿತ್ತಾಟದ ನಡುವೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments