ಹಿಂದೂ ವಿರೋಧಿ ಹೇಳಿಕೆ, ಇದೆಲ್ಲ ಅವರುಗಳ ಸೃಷ್ಟಿ: ಮಾಜಿ ಸಚಿವ ಆಂಜನೇಯ ಸ್ಪಷ್ಟನೆ

Sampriya
ಗುರುವಾರ, 13 ನವೆಂಬರ್ 2025 (20:00 IST)
Photo Credit X
ನವದೆಹಲಿ: ಏರ್‌ಪೋರ್ಟ್‌ನಲ್ಲಿ ನಮಾಜ್ ವಿಚಾರವಾಗಿ ಹಿಂದೂ ವಿರೋಧಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಮಾಜಿ ಸಚಿವ ಆಂಜನೇಯ ಅವರು ಈ ಸಂಬಂಧ ಪ್ರತಿಕ್ರಿಯಿಸಿ, ನಾನು ಮಾತನಾಡಿದ್ದೇನೆ. ನಾನು ಯಾರ ಭಾವನೆಯನ್ನೂ ಕೆರಳಿಸಿಲ್ಲ ಎಂದು ಸ್ಪಷ್ಟನೆ ನೀಡಿದರು. 

ಏರ್ ಪೋರ್ಟ್ ನಲ್ಲಿ ನಮಾಜ್ ಮಾಡಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, "ನಾನು ಇದರ ಬಗ್ಗೆ ವಿವಾದಾತ್ಮಕವಾದ ಹೇಳಿಕೆಯನ್ನೇ ಕೊಟ್ಟಿಲ್ಲ. ಜಾಗ ಇದ್ದ ಕಡೆ ಮನಸ್ಸಿನ ನೆಮ್ಮದಿಗಾಗಿ ದೇಶದ ಒಳಿತಿಗಾಗಿ ಪ್ರಾರ್ಥನರ ಮಾಡಿರಬಹುದು. ಈ ಹಿಂದೆ ಋಷಿ ಮುನಿಗಳು ಎಲ್ಲರ ಒಳಿತಿಗೆ ಪ್ರಾರ್ಥನೆ ಮಾಡುತ್ತಿದ್ದರು. ಅವರ ಪ್ರಾರ್ಥನೆಯಿಂದ ಯಾರಿಗಾದರೂ ತೊಂದರೆಯಾಗಿದೆಯೇ? ಇದೇ ವಿಚಾರಗಳನ್ನು ನಾನು ಹೇಳಿದ್ದು. ನಮ್ಮವರೇ ಅಂದರೆ ಅಸ್ಪೃಶ್ಯ, ಬಡ ವರ್ಗಕ್ಕೆ ಸೇರಿದವರು ನಾಮ ಹಾಕಿಕೊಂಡು ತಟ್ಟೆ ಹಿಡಿದುಕೊಂಡು ಟ್ರಾಫಿಕ್ ಸಿಗ್ನಲ್ ಗಳಲ್ಲಿ ದೇವರ ಹೆಸರಿನಲ್ಲಿ ಬಿಕ್ಷೆ ಬೇಡುತ್ತಾ ಇರುತ್ತಾರೆ" ಎಂದರು.

"ನಮ್ಮ ಧರ್ಮ, ದೇವರು ಆಚರಣೆಗಳನ್ನು ಅವರುಗಳು ವಿರೋಧ ಮಾಡಬಾರದು. ಆ ಧರ್ಮದವರು ಪ್ರಾರ್ಥನೆ ಮಾಡುವಾಗ ನಾವು ಕೂಡ ವಿರೋಧ ಮಾಡಬಾರದು. ಈ ದೃಷ್ಟಿಕೋನದಲ್ಲಿ ನಾನು ಮಾತನಾಡಿದ್ದೇನೆ. ನಾನು ಯಾರ ಭಾವನೆಯನ್ನೂ ಕೆರಳಿಸಿಲ್ಲ. ವಿವಾದಾತ್ಮಕ ಎಂದು ಕೊಂಡರೆ ಅದು ಅವರುಗಳ ಸೃಷ್ಟಿ" ಎಂದರು.

"ಅರ್ಚಕರಿಗೆ, ಪೂಜಾರಿಗಳಿಗೆ ಅವಮಾನ ಮಾಡಲಾಗಿದೆ ಎಂದು ಬಿಂಬಿಸಲಾಗಿದೆ. ನಾನು ಯಾವ ಹೆಸರನ್ನೂ ತೆಗೆದುಕೊಂಡಿಲ್ಲ. ಆದರೂ ಬೇಕಂತಲೇ ವಿವಾದ ಮಾಡಲಾಗಿದೆ" ಎಂದರು‌.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Delhi Blast: ಪುಲ್ವಾಮಾ ದಾಳಿಯ ಮಾಸ್ಟರ್‌ಮೈಂಡ್‌ನ ಪತ್ನಿಯೊಂದಿಗೆ ಶಾಹೀನ ಲಿಂಕ್

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ ರೈತರ ಬದುಕನ್ನು ಕಷ್ಟವಾಗಿಸಿದೆ: ಪ್ರಹ್ಲಾದ್ ಜೋಶಿ

Good News, ಇನ್ಮುಂದೆ ಬೆಳ್ಳಿ ಮೇಲೂ ಸಿಗಲಿದೆ ಸಾಲ

ಬೇಲೇಕೇರಿ ಅಕ್ರಮ ಗಣಿಗಾರಿಕೆ, ಕೈ ಶಾಸಕ ಸತೀಶ್ ಸೈಲ್‌ಗೆ ಕೊಂಚ ರಿಲೀಫ್‌

ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪೆರೇಡ್ ಗೆ ಅನುಮತಿ ಕೊಡ್ತಿದ್ದಂತೇ ಪ್ರಿಯಾಂಕ್ ಖರ್ಗೆ ಹೇಳಿದ್ದೇನು

ಮುಂದಿನ ಸುದ್ದಿ
Show comments