Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿನಿ ಹತ್ಯೆಗೈದ ಕೊಲೆಗಾರನಿಗೆ 4 ತಿಂಗಳಲ್ಲಿ ಗಲ್ಲು ತೀರ್ಪು ಪ್ರಕಟ!

Andhra student murder case andra pradesh ಆಂಧ್ರಪ್ರದೇಶ ವಿದ್ಯಾರ್ಥಿನಿ ಕೊಲೆ ಪ್ರಕರಣ
bengaluru , ಶನಿವಾರ, 30 ಏಪ್ರಿಲ್ 2022 (16:08 IST)
ಇಂಜಿನಿಯರ್ ವಿದ್ಯಾರ್ಥಿನಿಯನ್ನು ಹತ್ಯೆಗೈದ ಆರೋಪಿಗೆ ವಿಚಾರಣೆ ಆರಂಭವಾದ 4 ತಿಂಗಳಲ್ಲಿ ಗಲ್ಲು ಶಿಕ್ಷೆ ವಿಧಿಸುವ ಮೂಲಕ ನ್ಯಾಯಾಲಯ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ತೀರ್ಪು ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನಲ್ಲಪು ರಮ್ಯಾ ಕೆಲವೇ ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ಪರಿಚಯವಾದ ಕುಂಚಾಲ ಶಶಿಕಿರಣ ಎಂಬಾತ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅತ್ಯಂತ ಜನದಟ್ಟಣೆ ರಸ್ತೆಯಲ್ಲಿ ಹತ್ಯೆಗೈದಿದ್ದ.
ತುರ್ತು ವಿಚಾರಣಾ ನ್ಯಾಯಾಲಯ ಕಳೆದ ವರ್ಷ ಆಗಸ್ಟ್ ನಲ್ಲಿ ಈ ಹತ್ಯೆ ಪ್ರಕರಣ ನಡೆದಿದ್ದು, ಡಿಸೆಂಬರ್ 31ರಂದು ವಿಚಾರಣೆ ಕೈಗೆತ್ತಿಕೊಂಡಿತ್ತು. ಆದರೆ 4 ತಿಂಗಳಲ್ಲಿ ವಿಚಾರಣೆ ಪೂರೈಸಿದ ನ್ಯಾಯಾಲಯ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿತ್ತು.
ನ್ಯಾಯಾಲಯ ಅತ್ಯಂತ ವೇಗವಾಗಿ ತೀರ್ಪು ನೀಡಿ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಭಿನಂದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್‌ ನಟಿ ಜಾಕ್ವಲಿನ್‌ ಫರ್ನಾಂಡೀಸ್‌ ಗೆ ಸೇರಿದ 7 ಕೋಟಿ ಆಸ್ತಿ ಜಫ್ತಿ