Select Your Language

Notifications

webdunia
webdunia
webdunia
webdunia

ಬಾಲಿವುಡ್‌ ನಟಿ ಜಾಕ್ವಲಿನ್‌ ಫರ್ನಾಂಡೀಸ್‌ ಗೆ ಸೇರಿದ 7 ಕೋಟಿ ಆಸ್ತಿ ಜಫ್ತಿ

ED Jacqueline Fernandez bollywood ಬಾಲಿವುಡ್‌ ಜಾಕ್ವೆಲಿನ್‌ ಫರ್ನಾಂಡೀಸ್‌ ಇಡಿ
bengaluru , ಶನಿವಾರ, 30 ಏಪ್ರಿಲ್ 2022 (14:51 IST)
ಬಾಲಿವುಡ್‌ ನಟಿ ಜಾಕ್ವಲಿನ್‌ ಫೆರ್ನಾಂಡೀಸ್‌ ಗೆ ಸೇರಿದ 7.27 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಫ್ತಿ ಮಾಡಿದೆ.
ಕಾನ್‌ ಮ್ಯಾನ್‌ ಸುಕೇಶ್‌ ಚಂದ್ರಶೇಖರ್‌ ವಿರುದ್ಧದ ಹಣ ವಸೂಲಿ ಪ್ರಕರಣದಲ್ಲಿ ಜಾಕ್ವಲಿನ್‌ ಫರ್ನಾಂಡೀಸ್‌ ಅವರಿಗೆ ಸೇರಿದ ಬ್ಯಾಂಕ್‌ ಡಿಪಾಸಿಟ್‌ ಮೊತ್ತ 7.12 ಕೋಟಿ ರೂ. ಸೇರಿದಂತೆ ಒಟ್ಟಾರೆ 7.27 ಕೋಟಿ ರೂ. ಆಸ್ತಿಯನ್ನು ಜಫ್ತಿ ಮಾಡಲಾಗಿದೆ.
ಜಾಕ್ವಲಿನ್‌ ಫೆರ್ನಾಂಡೀಸ್‌ ಗೆ ಸುಕೇಶ್‌ ಚಂದ್ರಶೇಖರ್‌ 5.21 ಕೋಟಿ ರೂ. ಒಡವೆ ಉಡುಗೊರೆ ನೀಡಿದ್ದ. ಅಲ್ಲದೇ 1,73,000 ಡಾಲರ್‌ ಮತ್ತು 27 ಸಾವಿರ ಡಾಲರ್‌ ನಗದು ಬಹುಮಾನ ನೀಡಿದ್ದು ಬಂದಿದ್ದು, ತನಿಖೆಯಲ್ಲಿ ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಕೊಳದ ಮಠದ ಸ್ವಾಮೀಜಿ ಶಿವೈಕ್ಯ