Select Your Language

Notifications

webdunia
webdunia
webdunia
webdunia

Video: ಹಳಿ ಮೇಲೆ ಬಂದ ಈ ಅತಿಥಿಗಳಿಗಾಗಿ ಟ್ರೈನ್ ನಿಲ್ಲಿಸಿದ ಲೋಕೋ ಪೈಲೆಟ್

Viral video train
Photo Credit: X
ಆಂಧ್ರಪ್ರದೇಶದಲ್ಲಿ ಗ್ರಾಮಸ್ಥರ ಸಮಯಪ್ರಜ್ಞೆ ಮತ್ತು ಜೀವದಯೆಯಿಂದಾಗಿ ದೊಡ್ಡದೊಂದು ರೈಲು ಅಪಘಾತ ಹಾಗೂ ಮೂಕಪ್ರಾಣಿಗಳ ಪ್ರಾಣಾಪಾಯ ತಪ್ಪಿದೆ. ರೈಲ್ವೆ ಹಳಿಯ ಮೇಲೆ ಗೋವುಗಳು ಮತ್ತು ಗೂಳಿಗಳು ಸಿಲುಕಿಕೊಂಡಿರುವುದನ್ನು ಕಂಡ ಸ್ಥಳೀಯರು, ತಕ್ಷಣವೇ ಚಲಿಸುತ್ತಿದ್ದ ರೈಲನ್ನು ತಡೆದು ಪ್ರಾಣಿಗಳನ್ನು ರಕ್ಷಿಸಿದ್ದಾರೆ.

ಆಂಧ್ರಪ್ರದೇಶದ ರೈಲ್ವೆ ಮಾರ್ಗವೊಂದರಲ್ಲಿ ಸಾಗುತ್ತಿದ್ದ ಹಳಿಗಳ ಮೇಲೆ ಇದ್ದಕ್ಕಿದ್ದಂತೆ ದನ-ಗೂಳಿಗಳ ಹಿಂಡು ಬಂದು ಸಿಲುಕಿಕೊಂಡಿತ್ತು. ದೂರದಿಂದ ವೇಗವಾಗಿ ಬರುವ ರೈಲನ್ನು ಮತ್ತು ಹಳಿಯ ಮೇಲಿದ್ದ ಮೂಕಪ್ರಾಣಿಗಳನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಎಚ್ಚೆತ್ತುಕೊಂಡಿದ್ದಾರೆ.  ಸಮಯಪ್ರಜ್ಞೆ ಮೆರೆದ ಸಾರ್ವಜನಿಕರು ಕೆಂಪು ಬಟ್ಟೆ ಹಾಗೂ ಸೈನ್ ಮಾಡಿ ಚಾಲಕನಿಗೆ ಸುಳಿವು ನೀಡಿ, ಬರುವ ರೈಲನ್ನು ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾದರು.  ರೈಲು ತಕ್ಷಣವೇ ನಿಂತ ನಂತರ, ಹಳಿಯ ಮೇಲಿದ್ದ ಪ್ರಾಣಿಗಳನ್ನು ಮೆಲ್ಲಗೆ ಪಕ್ಕಕ್ಕೆ ಸರಿಸಿ ಹಳಿಯನ್ನು ತೆರವುಗೊಳಿಸಲಾಯಿತು.

ಸಮಯಕ್ಕೆ ಸರಿಯಾಗಿ ರೈಲು ನಿಂತಿದ್ದರಿಂದ ಯಾವುದೇ ಹಾನಿ ಅಥವಾ ಪ್ರಾಣಾಪಾಯ ಸಂಭವಿಸಿಲ್ಲ. ಹಳಿ ತೆರವುಗೊಂಡ ಬಳಿಕ ರೈಲು ಪ್ರಯಾಣವನ್ನು ಮುಂದುವರಿಸಿದೆ. ಮೂಕಪ್ರಾಣಿಗಳ ಪ್ರಾಣ ಉಳಿಸಲು ತಮ್ಮ ಜೀವದ ಹದನೋಡದೆ ಮುನ್ನೆಚ್ಚರಿಕೆ ವಹಿಸಿ ರೈಲು ತಡೆದ ಆಂಧ್ರಪ್ರದೇಶದ ಸ್ಥಳೀಯರ ಈ ಮಾನವೀಯತೆ ಹಾಗೂ ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

pic.twitter.com/APk6p3rWzZ

 

— indiainlast24hr (@indiain24hr) July 23, 2026

Share this Story:

Follow Webdunia kannada

ಮುಂದಿನ ಸುದ್ದಿ

ಶಿವಾಜಿನಗರದಲ್ಲಿ ಹಲ್ಲೆಗೊಳಗಾದ ಅಧಿಕಾರಿಗಳನ್ನು ಭೇಟಿಯಾಗಿ ಕೃಷ್ಣ ಭೈರೇಗೌಡ ನಡೆದುಕೊಂಡ ರೀತಿಗೆ ಮೆಚ್ಚುಗೆ