Select Your Language

Notifications

webdunia
webdunia
webdunia
webdunia

ಪತ್ನಿ ಜತೆ ವೈಯ್ಯಕ್ತಿಕ ಭೇಟಿಗೆ ನಿರಾಕರಣೆ, ಕೇಜ್ರಿವಾಲ್ ನೈತಿಕ ಸ್ಥೈರ್ಯ ಕುಗ್ಗಿಸುವ ಯತ್ನ: ಎಎಪಿ ಆರೋಪ

ಪತ್ನಿ ಜತೆ ವೈಯ್ಯಕ್ತಿಕ ಭೇಟಿಗೆ ನಿರಾಕರಣೆ, ಕೇಜ್ರಿವಾಲ್ ನೈತಿಕ ಸ್ಥೈರ್ಯ ಕುಗ್ಗಿಸುವ ಯತ್ನ: ಎಎಪಿ ಆರೋಪ

Sampriya

ನವದೆಹಲಿ , ಶನಿವಾರ, 13 ಏಪ್ರಿಲ್ 2024 (17:24 IST)
Photo Courtesy X
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಯತ್ನ ನಡೆಯುತ್ತಿದೆ ಎಂದು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಆರೋಪಿಸಿದರು.

ಈ ಸಂಬಂಧ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಜ್ರಿವಾಲ್‌ ಅವರಿಗೆ ತಮ್ಮ ಕುಟುಂಬದೊಂದಿಗೆ ವೈಯಕ್ತಿಕವಾಗಿ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಈ ಮೂಲಕ ಅವರ ಸ್ಥೈರ್ಯವನ್ನು ಕುಗ್ಗಿಸುವ ಯತ್ನ ನಡೆಸುತ್ತಿದೆ ಎಂದು ಆರೋಪಿಸಿದರು.

ಜೈಲಿನಲ್ಲಿ ದೊಡ್ಡ ಅಪರಾಧವನ್ನು ಮಾಡಿ ಬಂದವರಿಗೂ ವೈಯ್ಯಕ್ತಿಕ ಭೇಟಿಗೆ ಅವಕಾಶ ನೀಡುವಾಗ, ಕೇಜ್ರಿವಾಲ್ ಅವರನ್ನು ಕಬ್ಬಿಣದ ಬಲೆಯ ಆಚೆ ನಿಂತು ಮಾತನಾಡಲು ಅವಕಾಶ ನೀಡಲಾಗುತ್ತಿದೆ. ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮಂಗಳವಾರ ಪತ್ನಿ ಸುನೀತಾ ಕೇಜ್ರಿವಾಲ್‌ ಮತ್ತು ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಶೂ ಕಳ್ಳತನ: ಡೆಲಿವರಿ ಬಾಯ್‌ ಮೇಲೆ ಕ್ರಮ ಬೇಡ ಎಂದ ಸೋನು ಸೂದ್‌ಗೆ ನೆಟ್ಟಿಗರ ಪ್ರಶ್ನೆ