ನವದೆಹಲಿ,ಸೆ.17 : ಹೈದರಾಬಾದ್ ವಿಮೋಚನಾ ದಿನಾಚರಣೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣ ಮತ್ತು ಮರಾಠವಾಡ ಪ್ರದೇಶದ ಜನರಿಗೆ ಶುಭಾಷಯ ಕೋರಿದ್ದಾರೆ. ದೇಶದ ಏಕತೆಗೆ ಪ್ರಾಣತೆತ್ತ ಮಹಾನುಭಾವರಿಗೆ ನಾವು ಎಂದೆಂದೂ ಋಣಿಯಾಗಿರುತ್ತೇವೆ ಎಂದು ಅವರು ಹೇಳಿದ್ದಾರೆ.
ಆಖಂಡ ಭಾರತಕ್ಕೆ ಸೇರ್ಪಡೆಗೊಳ್ಳಲು ಮೀನಾಮೇಷ ಎಣಿಸುತ್ತಿದ್ದ ಹೈದರಾಬಾದ್ ಮೇಲೆ ಸೇನಾ ದಾಳಿ ನಡೆಸಿದ್ದ ಅಂದಿನ ಗೃಹಸಚಿವ ಸರ್ದಾರ್ಭಾಯ್ ಪಟೇಲ್ ಅವರು 1948 ಸೆ.17ರಂದು ಹೈದ್ರಾಬಾದ್ ಅನ್ನು ಭಾರತದ ಅವಿಭಾಜ್ಯ ಅಂಗ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.
ನಿಜಾಮರ ವಿರುದ್ಧ ಹೋರಾಡಿ ಹೈದರಾಬಾದ್ ವಿಮೋಚನೆ ಕಲ್ಪಿಸುವ ಕಾರ್ಯದಲ್ಲಿ ತಮ್ಮ ಪ್ರಾಣ ಬಲಿಕೊಟ್ಟ ಹುತಾತ್ಮರಿಗೆ ನಾನು ಶಿರಭಾಗಿ ನಮಸ್ಕರಿಸುತ್ತೇನೆ ಎಂದು ಅವರು ಟ್ವಿಟ್ ಮಾಡಿದ್ದಾರೆ.
ಕಾರ್ಯಕ್ರಮವೊಂದರ ನಿಮಿತ್ತ ಇಂದು ತೆಲಂಗಾಣಕ್ಕೆ ಶಾ ಭೇಟಿ ನೀಡುತ್ತಿರುವ ದಿನವೇ ತೆಲಂಗಾಣ ಸ್ವಾತಂತ್ರ್ಯ ದಿನಾಚರಣೆ ಆಗಿರುವುದು ವಿಶೇಷ.
ಹೀಗಾಗಿ ಹೈದರಾಬಾದ್ ವಿಮೋಚನಾ ದಿನಾಚರಣೆಗೆ ಟ್ವಿಟರ್ನಲ್ಲಿ ತೆಲುಗುಭಾಷಿಕರಿಗೆ ಶುಭಾಷಯ ಕೋರಿ ಟ್ವಿಟ್ನಲ್ಲಿ ಪಟೇಲ್ ಅವರ ಭಾವಚಿತ್ರವನ್ನು ಶೇರ್ ಮಾಡಿದ್ದಾರೆ.