Webdunia - Bharat's app for daily news and videos

Install App

ಪಿಎಂ ಆಡಳಿತ ಶೈಲಿ ಶ್ಲಾಘಿಸಿದ ಅಮಿತ್ ಶಾ

Webdunia
ಭಾನುವಾರ, 10 ಅಕ್ಟೋಬರ್ 2021 (14:08 IST)
ಹೊಸದಿಲ್ಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ''ನಾನು ಇದುವರೆಗೆ ನೋಡಿದ್ದರಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಪ್ರಜಾಪ್ರಭುತ್ವವಾದಿ ನಾಯಕ'' ಎಂದು ಶಾ ಹೇಳಿದ್ದಾರೆ.

ಮೋದಿ 'ಸರ್ವಾಧಿಕಾರಿ' ಎಂಬ ಮಾತುಗಳನ್ನು ವಿರೋಧಿಸುತ್ತಾ ಸಂಸದ್ ಟಿವಿ ಯಲ್ಲಿ ಸಂದರ್ಶನದ ವೇಳೆ ಅಮಿತ್ ಶಾ ಈ ಮಾತುಗಳನ್ನಾಡಿದ್ದಾರೆ.
“ಮೋದಿ ಅವರ ಜೊತೆ ವಿರೋಧ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ನಾನು ಅವರಂತಹ ಕೇಳುಗನನ್ನು ಇದುವರೆಗೆ ಭೇಟಿ ಮಾಡಿಲ್ಲ. ಯಾವುದೇ ವಿಷಯದ ಬಗ್ಗೆ ಸಭೆ ಇರಲಿ, ಮೋದಿ ಅವರು ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಾರೆ ಮತ್ತು ಎಲ್ಲರ ಮಾತನ್ನೂ ತಾಳ್ಮೆಯಿಂದ ಕೇಳುತ್ತಾರೆ. ಅವರು ವ್ಯಕ್ತಿಯ ಅಭಿಪ್ರಾಯದ ಮೌಲ್ಯವನ್ನು ಪರಿಗಣಿಸುತ್ತಾರೆ, ಹಾಗಾಗಿ ಅವರು ಸರ್ವಾಧಿಕಾರಿ ಎಂಬ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂದು ಅಮಿತ್ ಶಾ ಹೇಳಿದರು.
ಪಿಎಂ ಮೋದಿ ಸಾರ್ವಜನಿಕ ಸೇವೆಯಲ್ಲಿ 20 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಅಮಿತ್ ಶಾ, ಪಿಎಂ ಆಡಳಿತ ಶೈಲಿಯನ್ನು ಶ್ಲಾಘಿಸಿದರು. ಪ್ರತಿಪಕ್ಷಗಳು ಆಧಾರರಹಿತ ಆರೋಪಗಳಿಂದ ಸರ್ಕಾರದ ಪ್ರತಿಷ್ಠೆಯನ್ನು ಹಾಳುಗೆಡವಲು ಪ್ರಯತ್ನಿಸುತ್ತಿವೆ ಎಂದರು.
“ಮೋದಿ ಜಿ ಕ್ಯಾಬಿನೆಟ್ ಅನ್ನು ಅತ್ಯಂತ ಪ್ರಜಾಪ್ರಭುತ್ವ ರೀತಿಯಲ್ಲಿ ನಡೆಸುತ್ತಾರೆ. ಒಂದು ವೇದಿಕೆಯಲ್ಲಿ ಏನು ಚರ್ಚಿಸಲಾಗಿದೆ ಎಂಬುದನ್ನು ಸಾರ್ವಜನಿಕ ವಲಯಕ್ಕೆ ಸೋರಿಕೆ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಅವರು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ತಪ್ಪು ಗ್ರಹಿಕೆ ಇದೆ. ಆದರೆ ಅದು ಹಾಗಲ್ಲ, ಅವರು ವಿಷಯವನ್ನು ಚರ್ಚಿಸುತ್ತಾರೆ, ಎಲ್ಲರ ಮಾತನ್ನು ಕೇಳುತ್ತಾರೆ ಮತ್ತು ಸಾಧಕ -ಬಾಧಕಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಆದರೆ ಅಂತಿಮ ನಿರ್ಧಾರವು ಅವರದ್ದೆ, ಯಾಕೆಂದರೆ ಅವರು ಪ್ರಧಾನಿ ಮಂತ್ರಿ “ಎಂದು ಶಾ ವಿವರಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments