Select Your Language

Notifications

webdunia
webdunia
webdunia
webdunia

ಉತ್ತರಪ್ರದೇಶ ಚುನಾವಣೆ ರಣತಂತ್ರ ರೂಪಿಸುತ್ತಿರುವ ಅಮಿತ್ ಶಾ

ಉತ್ತರಪ್ರದೇಶ ಚುನಾವಣೆ ರಣತಂತ್ರ ರೂಪಿಸುತ್ತಿರುವ ಅಮಿತ್ ಶಾ
ಕಾಸ್‌ಗಂಜ್(ಉತ್ತರಪ್ರದೇಶ): , ಗುರುವಾರ, 9 ಜೂನ್ 2016 (15:41 IST)
ಮುಂದಿನ ವಾರ ಅಲಹಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿರುವುದರಿಂದ ಅಂದಿನಿಂದಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರಪ್ರದೇಶದ ಚುನಾವಣೆ ಪ್ರಚಾರ ಉದ್ಘಾಟಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಬೂತ್ ಮಟ್ಟದ 18 ಸಾವಿರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಬೇರುಮಟ್ಟದಿಂದ ಬಿಜೆಪಿ ಪಕ್ಷವನ್ನು ಸಂಘಟಿಸುವುದಲ್ಲದೇ ಮತದಾರರು ಮತಕೇಂದ್ರಗಳಲ್ಲಿ ಮತದಾನ ಮಾಡಿಸುವಂತಹ ವಾತಾವರಣ ಸೃಷ್ಟಿಸುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
 
ಉತ್ತರ ಪ್ರದೇಶ ಚುನಾವಣೆಯಲ್ಲಿ ಅಧಿಕಾರದಲ್ಲಿರುವ ಸಮಾಜವಾದಿ ಪಕ್ಷ ಬಿಜೆಪಿಯ ಪ್ರಮುಖ ಎದುರಾಳಿಯಾಗಿದ್ದು, ಮೂರನೇ ಸ್ಥಾನವನ್ನು ಬಹಜನ ಸಮಾಜ ಪಕ್ಷಕ್ಕೆ ನೀಡಿದ್ದಾರೆ ಎನ್ನಲಾಗಿದೆ.
 
ದಲಿತರ ವಿಷಯದ ಕುರಿತಂತೆ ಮಾತನಾಡಿದ ಅವರು, ಸಮಾಜವಾದಿ ಪಕ್ಷ ದಲಿತರ ಮೇಲೆ ಶೋಷಣ ನಡೆಸಿದೆ. ಬಿಎಸ್‌ಪಿ ಪಕ್ಷ ದಲಿತರನ್ನು ಬಳಸಿಕೊಂಡಿದೆ. ದಲಿತರ ಏಳಿಗೆಗಾಗಿ ಏನಾದರೂ ಮಾಡುವುದಾದರೇ ಅದು ಬಿಜೆಪಿ ಪಕ್ಷ ಮಾತ್ರ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರಕಾರ ನಿಜಾಮ್ ಸರಕಾರಕ್ಕಿಂತಲೂ ಕೆಟ್ಟ ಸರಕಾರ: ಶಿವಸೇನೆ