Select Your Language

Notifications

webdunia
webdunia
webdunia
webdunia

ವಾಯುಸೇನೆಯ ಮುಖ್ಯಸ್ಥರಾಗಿ ಅಮರ್ ಪ್ರೀತ್ ಸಿಂಗ್ ನೇಮಕ

ವಾಯುಸೇನೆಯ ಮುಖ್ಯಸ್ಥರಾಗಿ ಅಮರ್ ಪ್ರೀತ್ ಸಿಂಗ್ ನೇಮಕ

Sampriya

ನವದೆಹಲಿ , ಶನಿವಾರ, 21 ಸೆಪ್ಟಂಬರ್ 2024 (17:07 IST)
Photo Courtesy X
ನವದೆಹಲಿ: ಹಾಲಿ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್. ಚೌಧರಿ ಅವರು ಸೆ.30ರಂದು ನಿವೃತ್ತರಾಗಲಿರುವ ಹಿನ್ನೆಲೆ ವಾಯುಸೇನೆಯ ಮುಖ್ಯಸ್ಥರಾಗಿ ಏರ್‌ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ.  

ಪ್ರೀತ್‌ ಸಿಂಗ್ ಅವರು ಚೌಧರಿ ಅವರಿಂದ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆಂದು ರಕ್ಷಣಾ ಸಚಿವಾಲಯ ಹೇಳಿದೆ.

ಅಮರ್ ಪ್ರೀತ್ ಸಿಂಗ್ ಅವರು 5 ಸಾವಿರ ಗಂಟೆಗೂ ಹೆಚ್ಚು ಕಾಲ ಯುದ್ಧ ವಿಮಾನ ಹಾರಾಟ ನಡೆಸಿರುವ ಅನುಭವ ಹೊಂದಿದ್ದಾರೆ. ಸದ್ಯ ಇವರು ವಾಯು ಸೇನೆಯ ಉಪ ಮುಖ್ಯಸ್ಥರಾಗಿದ್ದಾರೆ.

ಏರ್ ಮಾರ್ಷಲ್ ಅಮರ್ ಪ್ರೀತಿ ಸಿಂಗ್ ಅವರು ಪಿವಿಎಸ್‌ಎಂ, ಎವಿಎಸ್ಎಂ ಹಾಗೂ ವಾಯು ಸೇನೆಯಲ್ಲಿ ಸದ್ಯ ಉಪ ಮುಖ್ಯಸ್ಥರನ್ನಾಗಿ ಸರ್ಕಾರ ಈವರೆಗೂ ನಿಯೋಜಿಸಿದೆ.

ಸೆ. 30ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಏರ್‌ ಮಾರ್ಷಲ್ ಸಿಂಗ್ ಅವರು ವಾಯು ಸೇನೆಯ ಮುಖ್ಯಸ್ಥರಾಗಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್‌ ಸೋಗಿನಲ್ಲಿ ಬಿಲ್ಡಪ್‌: ಜೈಲು ಸೇರಿದ 18ರ ಪೋರ