ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ಪ್ರದೇಶಗಳ ಜನರು ಕೂಡ ಈಗ ಆಲ್ ಇಂಡಿಯಾ ರೇಡಿಯೊ ಕಾರ್ಯಕ್ರಮಗಳನ್ನು ಕೇಳಿ ಆನಂದಿಸಬಹುದು. ಬಲೂಚಿಸ್ತಾನ ಮತ್ತು ಪಿಒಕೆಯಲ್ಲಿ ಪಾಕಿಸ್ತಾನದ ದೌರ್ಜನ್ಯಗಳನ್ನು ಪ್ರಧಾನಿ ತಮ್ಮ ಸ್ವಾತಂತ್ರ್ಯ ದಿನ ಭಾಷಣದಲ್ಲಿ ಪ್ರಸ್ತಾಪಿಸಿದ ಬಳಿಕ ಕೇಂದ್ರ ಸರ್ಕಾರವು ಈ ಸೌಲಭ್ಯ ಕಲ್ಪಿಸಿದೆ.
ಕೇಂದ್ರ ಸರ್ಕಾರವು ಜಮ್ಮುವಿನಲ್ಲಿ 300 ಕೆವಿ ಡಿಜಿಟಲ್ ರೇಡಿಯೊ ಮಾಂಡಿಯಲ್ ಟ್ರಾನ್ಸ್‌ಮಿಟರ್ ಅಳವಡಿಸುವ ಮೂಲಕ ಎಐಆರ್ ಪ್ರಸಾರದ ಸಿಗ್ನಲ್ ಸಾಮರ್ಥ್ಯ ಹೆಚ್ಚಿಸಿದ ನಂತರ ಈ ಬೆಳವಣಿಗೆ ಉಂಟಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎಐಆರ್ ಜಮ್ಮು ಕೇಂದ್ರದಿಂದ ಪ್ರಸಾರವಾಗುವ ಅನೇಕ ವಿಧದ ಕಾರ್ಯಕ್ರಮಗಳನ್ನು ಪಿಒಕೆ ಆಚೆ ಪಂಜಾಬ್ ಪ್ರಾಂತ್ಯದಲ್ಲಿ ಕೂಡ ಆಲಿಸಬಹುದಾಗಿದೆ ಎಂದು ಅವು ಹೇಳಿವೆ.
ಡಿಆರ್‌ಎಂ ಪ್ರಸಾರದ ಆರಂಭದಲ್ಲಿ ಶಬ್ದದ ತರಂಗಗಳು ಗಟ್ಟಿ, ಸ್ಥಿರ ಮತ್ತು ಸಮರೂಪವಾಗಿದ್ದು, ಸಿಗ್ನಲ್ ಅಡ್ಡಿಯಿರುವುದಿಲ್ಲ ಎಂದು ಮೂಲಗಳು ಹೇಳಿವೆ.