Select Your Language

Notifications

webdunia
webdunia
webdunia
webdunia

ಪ್ಯಾರಾಸಿಟಮೊಲ್ ಟ್ಯಾಬ್ಲೆಟ್ ಬಳಕೆ ಮಾಡುವ ಮುನ್ನ ಹುಷಾರ್: ನಕಲಿ, ಕಲಬೆರಕೆ ಔಷಧಗಳ ಲಿಸ್ಟ್ ನೋಡಿ

tablet

Krishnaveni K

ನವದೆಹಲಿ , ಗುರುವಾರ, 26 ಸೆಪ್ಟಂಬರ್ 2024 (16:36 IST)
ನವದೆಹಲಿ: ಜ್ವರ, ತಲೆನೋವು, ಮೈ ಕೈ ನೋವು ಎಂದು ಏನೇ ಆದರೂ ಒಂದು ಪ್ಯಾರಾಸಿಟಮೊಲ್ ಟ್ಯಾಬ್ಲೆಟ್ ತಂದು ನುಂಗಿ ಬಿಡುತ್ತೇವೆ. ಆದರೆ ಪ್ಯಾರಾಸಿಟಮೊಲ್ ಮಾತ್ರೆ ಹಾಗೂ ನೀವು ಹೆಚ್ಚಾಗಿ ಬಳಕೆ ಮಾಡುವ ಕೆಲವೊಂದು ಗುಳಿಗೆಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯರಲಿ.

ಯಾಕೆಂದರೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್ ಸಿಒ) ನಾವು ಹೆಚ್ಚಾಗಿ ಬಳಕೆ ಮಾಡುವ ಸುಮಾರು 50 ಗುಳಿಗೆಗಳ ಗುಣಮಟ್ಟ ಪರೀಕ್ಷೆ ನಡೆಸಿದ್ದು ಇದರಲ್ಲಿ 48 ಗುಳಿಗೆಗಳು ನಿರೀಕ್ಷಿತ ಗುಣಮಟ್ಟ ತಲುಪುವಲ್ಲಿ ವಿಫಲವಾಗಿದೆ ಮತ್ತು ಅವುಗಳು ಕಲಬೆರಕೆ ಮತ್ತು ನಕಲಿ ಅಂಶಗಳನ್ನೊಳಗೊಂಡಿದೆ ಎಂದು ಅಭಿಪ್ರಾಯಪಟ್ಟಿದೆ.

ಈ ಪೈಕಿ ನಾವು ಹೆಚ್ಚಾಗಿ ಬಳಸುವ ಪ್ಯಾರಾಸಿಟಮೊಲ್, ಪ್ಯಾನ್ ಡಿ, ಬಿಪಿ ಮಾತ್ರೆಗಳು, ಮಧುಮೇಹ ನಿಯಂತ್ರಕ ಮತ್ತು ಕೆಲವೊಂದು ವಿಟಮಿನ್, ಕ್ಯಾಲ್ಶಿಯಂ ಮಾತ್ರೆಗಳೂ ಕೂಡಾ ಸೇರಿವೆ ಎಂಬುದು ಆತಂಕಕಾರೀ ಅಂಶವಾಗಿದೆ. ಇದರಲ್ಲಿ ಯೂನಿಕ್ಯೂರ್ ಇಂಡಿಯಾ ಲಿಮಿಟೆಡ್, ಹೆಟರೊ ಡ್ರಗ್ಸ್, ಹೆಲ್ತ್ ಬಯೋಟೆಕ್ ಲಿಮಿಟೆಡ್, ಆಲ್ಕೆಮ್ ಲ್ಯಾಬೋರೇಟರೀಸ್, ಹಿಂದೂಸ್ಥಾನ್ ಆಂಟಿಬಯೋಟಿಕ್ಸ್ ಲಿಮಿಟೆಡ್, ಲೈಫ್ ಮ್ಯಾಕ್ಸ್ ಕ್ಯಾನ್ಸರ್ ಲ್ಯಾಬೋರೇಟರೀಸ್, ಪ್ಯೂರ್ ಆಂಡ್ ಕ್ಯೂರ್ ಹೆಲ್ತ್ ಕೇರ್ ಮತ್ತು ಮೆಗ್ ಲೈಫ್ ಸೈನ್ಸಸ್ ಕಂಪನಿಗಳು ತಯಾರಿಸುವ ಔಷಧಗಳು ಒಳಗೊಂಡಿವೆ.

ಯಾವೆಲ್ಲಾ ಔಷಧಿಗಳು ನಕಲಿ ಮತ್ತು ಹಾನಿಕಾರಕ ಪಟ್ಟಿಗೆ ಸೇರಿವೆ ಎಂಬುದರ ಲಿಂಕ್ ಇಲ್ಲಿದೆ ನೋಡಿ.
https://cdsco.gov.in/opencms/opencms/system/modules/CDSCO.WEB/elements/download_file_division.jsp?num_id=MTIwMTA=

Share this Story:

Follow Webdunia kannada

ಮುಂದಿನ ಸುದ್ದಿ

ಮುನಿರತ್ನ ರಾಸಲೀಲೆ ಬಗ್ಗೆ ಮತ್ತೊಂದು ಗಂಭೀರ ಆರೋಪ ಮಾಡಿದ ಸಂತ್ರಸ್ತೆ