Select Your Language

Notifications

webdunia
webdunia
webdunia
Sunday, 2 March 2025
webdunia

ನಾಯಿಗಳಿಗೂ ಏರ್ ಕಂಡೀಷನ್ ಫ್ಲ್ಯಾಟ್ !

ನಾಯಿಗಳಿಗೂ ಏರ್ ಕಂಡೀಷನ್ ಫ್ಲ್ಯಾಟ್ !
ಕೋಲ್ಕತ್ತಾ , ಮಂಗಳವಾರ, 26 ಜುಲೈ 2022 (11:58 IST)
ಕೋಲ್ಕತ್ತಾ : ಶಾಲಾ ಸೇವಾ ಆಯೋಗದ(ಎಸ್ಎಸ್ಸಿ) ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಬೆಳಗ್ಗೆ ಜಾರಿ.

 ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಪಾರ್ಥ ಚಟರ್ಜಿ ಅವರು ತಮ್ಮ ನಾಯಿಗಳಿಗೂ ಫ್ಲಾಟ್ ಹೊಂದಿದ್ದಾರೆಂದು ವರದಿಯಾಗಿದೆ.

ಪಾರ್ಥ ಅವರು ಸಾಕಿದ ನಾಯಿಗೂ ಹವಾ ನಿಯಂತ್ರಿತ ಫ್ಲ್ಯಾಟ್ ಒದಗಿಸಿದ್ದರು. ದಕ್ಷಿಣ ಕೋಲ್ಕತ್ತಾದ ನಕ್ತಾಲಾ ಬಳಿ ಪಾರ್ಥ ಅವರು ಐಷಾರಾಮಿ ಫ್ಲ್ಯಾಟ್ ಹೊಂದಿದ್ದು, ಇದನ್ನು ಕೇವಲ ನಾಯಿಗಳಿಗಾಗಿಯೇ ಮೀಸಲಿಟ್ಟಿದ್ದರು. ಅವರು 3 ಸಾಕುನಾಯಿಗಳನ್ನು ಸಾಕುತ್ತಿದ್ದು, ಅವುಗಳನ್ನು ‘ಸಿದ್ಧಿ ಎನ್ಕ್ಲೇವ್’ನ 2ನೇ ಮಹಡಿಯಲ್ಲಿ ಇರಿಸಲಾಗಿದೆ. 

ನಾಯಿಗಳನ್ನು ತಂಪಾಗಿಡಲು ಏರ್ ಕಂಡಿಷನರ್ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಾಗಿದೆ. ಇದಲ್ಲದೆ, ಪಾರ್ಥ ಅವರು ತಮ್ಮ ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಮಹಿಳೆ ಸೇರಿದಂತೆ 2 ಕೇರ್ಟೇಕರ್ಗಳನ್ನು ಸಹ ನೇಮಿಸಿಕೊಂಡಿದ್ದಾರೆ. ಫ್ಲ್ಯಾಟ್ ನಲ್ಲಿ ಮೊದಲು ನಾಲ್ಕು ನಾಯಿಗಳಿದ್ದವು. ಆದರೆ ಸ್ವಲ್ಪ ವರ್ಷಗಳ ಹಿಂದೆ ಒಂದು ನಾಯಿ ಮೃತ ಪಟ್ಟಿದ್ದು, ಈಗ ಮೂರು ನಾಯಿಗಳಿವೆ.

ಪಾರ್ಥ ಅವರ ಮನೆ ಮೇಲೆ ನಡೆಸಿದ ದಾಳಿ ವೇಳೆ ಶಿಕ್ಷಕ ನೇಮಕಾತಿ ಪರೀಕ್ಷೆಯ ಪ್ರವೇಶ ನೇಮಕಾತಿ ಪತ್ರ ಮತ್ತು ಆಸ್ತಿ ಪತ್ರಗಳು ಪತ್ತೆಯಾಗಿವೆ.


Share this Story:

Follow Webdunia kannada

ಮುಂದಿನ ಸುದ್ದಿ

6 ಮಂದಿಯ ಜೊತೆ ವಿವಾಹ : ಪತ್ನಿಯರಿಗೂ ಬಂದಿಲ್ಲ ಅನುಮಾನ ! ಮುಂದೇನಾಯ್ತು?