Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

Sampriya
ಬುಧವಾರ, 18 ಜೂನ್ 2025 (19:08 IST)
ಅಹಮದಾಬಾದ್‌: ಜೂನ್‌ 12ರಂದು ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 270 ಮಂದಿಯ ಪೈಕಿ 190 ಮಂದಿಯ ಗುರುತು ಪತ್ತೆಯಾಗಿದೆ. ಗುರುತು ಪತ್ತೆಯಾದ 32 ಮಂದಿ ವಿದೇಶಿಗರೂ ಸೇರಿದಂತೆ 159 ಜನರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ .

ಕುಟುಂಬಸ್ಥರಿಗೆ ಹಸ್ತಾಂತರಿಸಲಾದ 127 ಭಾರತೀಯರ ಮೃತದೇಹಗಳ ಪೈಕಿ, 123 ಮಂದಿ ವಿಮಾನದ ಪ್ರಯಾಣಿಕರಾಗಿದ್ದರೆ, ನಾಲ್ವರು ಘಟನಾ ಸ್ಥಳದಲ್ಲಿದ್ದ ದುರ್ದೈವಿಗಳು ಎಂದು ಅವರು ತಿಳಿಸಿದರು.

ಭೀಕರ ವಿಮಾನ ಅವಘಡದಲ್ಲಿ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಉಳಿದವರ ಗುರುತು ಪತ್ತೆಗೆ ಡಿಎನ್ಎ ತಾಳೆ ನೋಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. 

ವಿಮಾನ ಪತನದ ಸಂದರ್ಭದಲ್ಲಿ ಗಾಯಗೊಂಡು 71 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಏಳು ಮಂದಿ ಮಾತ್ರ ಅಹಮದಾಬಾದ್‌ ಸರ್ಕಾರಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಸಂದರ್ಭದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ವಿಮಾನ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್‌ ಅವರು ಗುಣಮುಖರಾಗಿದ್ದು ಅಹಮದಾಬಾದ್‌ನ ಸಿವಿಲ್‌ ಆಸ್ಪತ್ರೆಯಿಂದ ಬುಧವಾರ ನಿರ್ಗಮಿಸಿದರು ಎಂದು ಅಧಿಕಾರಿಗಳು ತಿಳಿಸಿದರು. ಬಳಿಕ ಅವರು ಅವಘಡದಲ್ಲಿ ಮೃತಪಟ್ಟ ಸಹೋದರ ಅಜಯ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಧಾನಸೌಧದ ಎದುರು ಕಿತ್ತಾಟ, 11ಮಂದಿ ಅರೆಸ್ಟ್‌

ತಿರುಮಲ ಲಡ್ಡು ಕಲಬೆರಕೆ ಪ್ರಕರಣ, ಮತ್ತೊಂದು ಬೆಚ್ಚಿಬೀಳಿಸುವ ಅಂಶ

ಕಾಂಗ್ರೆಸ್ ಎರಡೂವರೆ ವರ್ಷ ಪೂರೈಸಿದ್ದೇ ಸಾಧನೆ: ವಿಜಯೇಂದ್ರ

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ಡಿಕೆಶಿ ಆ ಸ್ಥಾನದಲ್ಲಿ ಮುಂದುವರೆಯಲು ಬಿಡಲ್ಲ: ಪ್ರಹ್ಲಾದ್ ಜೋಶಿ

ರೈಲಿನ ಎಸಿ ಕೋಚ್‌ನಲ್ಲಿ ಕೆಟಲ್‌ನಲ್ಲಿ ನೂಡಲ್ಸ್ ಮಾಡಿದ ಮಹಿಳೆಗೆ ಇದೀಗ ಢವಢವ

ಮುಂದಿನ ಸುದ್ದಿ
Show comments