Webdunia - Bharat's app for daily news and videos

Install App

ಅತುಲ್ ಸುಭಾಷ್ ಪ್ರಕರಣದ ಇಫೆಕ್ಟ್: ಇನ್ನು ಮುಂದೆ ವಿಚ್ಛೇದನ ನೀಡಲು ಈ 8 ಸೂತ್ರಗಳು ಅನ್ವಯ

Krishnaveni K
ಶುಕ್ರವಾರ, 13 ಡಿಸೆಂಬರ್ 2024 (10:17 IST)
ನವದೆಹಲಿ: ಬೆಂಗಳೂರಿನಲ್ಲಿ ಪತ್ನಿಯ ವರದಕ್ಷಿಣೆ ಕಿರುಕುಳ ಕೇಸ್ ನಿಂದ ಹೈರಾಣಾಗಿ ಆತ್ಮಹತ್ಯೆ ಮಾಡಿಕೊಂಡ ಟೆಕಿ ಅತುಲ್ ಸುಭಾಷ್ ಪ್ರಕರಣದ ನಂತರ ವಿಚ್ಛೇದನ ಪ್ರಕರಣ ಇತ್ಯರ್ಥಕ್ಕೆ ಸುಪ್ರೀಂಕೋರ್ಟ್ ಮಹತ್ವದ 8 ಸೂತ್ರಗಳನ್ನು ಅಳವಡಿಸಲು ಸೂಚಿಸಿದೆ.

ದೇಶದ ಎಲ್ಲಾ ಕೋರ್ಟ್ ಗಳಿಗೆ ಅನ್ವಯವಾಗುವಂತೆ ಈ ಆದೇಶ ನೀಡಲಾಗಿದೆ. ಪತಿ-ಪತ್ನಿ ಕಲಹ ಪ್ರಕರಣದಲ್ಲಿ ಶಾಶ್ವತ ಜೀವನಾಂಶವನ್ನು ನಿರ್ಧರಿಸುವ ವೇಳೆ ನ್ಯಾಯಾಲಯಗಳು ಈ ಎಂಟು ಮಾರ್ಗಸೂಚಿಗಳನ್ನು ಅನುಸರಿಸಲು ಆದೇಶ ನೀಡಲಾಗಿದೆ. ಇದರಿಂಧ ಪುರುಷರಿಗೂ ಅನ್ಯಾಯವಾಗದಂತೆ ತಡೆಯಬಹುದಾಗಿದೆ.

ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾ. ವಿಕ್ರಮ್ ನಾಥ್ ಮತ್ತು ನ್ಯಾ. ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂದು ನ್ಯಾಯಪೀಠ ಈ ತೀರ್ಪು ನೀಡಿದೆ. ದೇಶದ ಎಲ್ಲಾ ನ್ಯಾಯಾಲಯಗಳೂ ಜೀವನಾಂಶ ಮೊತ್ತವನ್ನು ನಿರ್ಧರಿಸುವಾಗ ಈ ಸೂತ್ರಗಳನ್ನು ಪಾಲಿಸಬೇಕಾಗುತ್ತದೆ.

ಮಾರ್ಗಸೂಚಿಗಳೇನು
  1. ಎರಡೂ ಕಡೆಯವರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ತಿಳಿಯಬೇಕು
  2. ಪತ್ನಿ ಮತ್ತು ಮಕ್ಕಳ ಅಗತ್ಯತೆ ತಿಳಿದುಕೊಳ್ಳಬೇಕು
  3. ಪತ್ನಿ ಮತ್ತು ಪತಿಯ ಉದ್ಯೋಗ ಮತ್ತು ವಿದ್ಯಾರ್ಹತೆ ತಿಳಿದುಕೊಳ್ಳಬೇಕು
  4. ಅರ್ಜಿದಾರರ ಆದಾಯ, ಆಸ್ತಿ ಪರಿಗಣಿಸಬೇಕು
  5. ಪತಿಯ ಮನೆಯಲ್ಲಿ ಪತ್ನಿಯ ಜೀವನಮಟ್ಟ ಹೇಗಿದೆ ಎಂದು ತಿಳಿದುಕೊಳ್ಳಬೇಕು
  6. ಕೌಟುಂಬಿಕ ಜವಾಬ್ಧಾರಿ ಕಾರಣ ನೌಕರಿ ತೊರೆದಿದ್ದಾರೆಯೇ ಎಂದು ತಿಳಿದುಕೊಳ್ಳಬೇಕು
  7. ಪತ್ನಿ ಉದ್ಯೋಗಸ್ಥೆ ಅಲ್ಲದೇ ಇದ್ದರೆ ಕಾನೂನು ಹೋರಾಟದ ವೆಚ್ಚ ಭರಿಸಬೇಕು
  8. ಪತಿಯ ಆರ್ಥಿಕ ಸಾಮರ್ಥ್ಯ, ಆದಾಯ, ಭಾದ್ಯತೆಗಳನ್ನು ತಿಳಿದುಕೊಳ್ಳಬೇಕು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments