Select Your Language

Notifications

webdunia
webdunia
webdunia
webdunia

ಕೆಲ ವರ್ಷಗಳ ಬಳಿಕ ಏಕಾಂತ ಪ್ರಾರ್ಥನೆಗೆ ಅವಕಾಶ ಸಿಕ್ಕಿದೆ- ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ನವದೆಹಲಿ
ನವದೆಹಲಿ , ಭಾನುವಾರ, 19 ಮೇ 2019 (09:47 IST)
ನವದೆಹಲಿ : ಶನಿವಾರ ಪಹರಿ ಉಡುಗೆಯಲ್ಲಿ ಕೇದಾರನಾಥ ಗುಹೆಯಲ್ಲಿ ಧ್ಯಾನಕ್ಕೆ ಕುಳಿತ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಕೇದಾರನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.




ನಿನ್ನೆ ಮಧ್ಯಾಹ್ನ 2.45 ರಿಂದ ಧ್ಯಾನಸ್ಥರಾಗಿರುವ ಮೋದಿ ಇಂದು ಬೆಳಗ್ಗೆ ಧ್ಯಾನ ಮುಗಿಸಿದ್ದು, ಬರೋಬ್ಬರಿ 20 ಗಂಟೆ ಕಾಲ ಮೋದಿ ತಪಸ್ಸು ಕೈಗೊಂಡಿದ್ದಾರೆ ಎನ್ನಲಾಗಿದೆ.  ಧ್ಯಾನದ ಬಳಿಕ ಬದರೀನಾಥ್ ದೇಗುಲಕ್ಕೂ ಭೇಟಿ ನೀಡಲಿದ್ದಾರೆ.


ಇದೀಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿನ್ನೆ ಕೇದರನಾಥದ ಗುಹೆಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಕೆಲ ವರ್ಷಗಳ ಬಳಿಕ ಏಕಾಂತ ಪ್ರಾರ್ಥನೆಗೆ ಅವಕಾಶ ಸಿಕ್ಕಿದೆ. ದೇಶದಲ್ಲಿನ ಸದ್ಯದ ವಾತಾವರಣದಿಂದ ಸಂಪೂರ್ಣ ಹೊರಗಿದ್ದೆ. ರಾಜಕೀಯ ಚಟುವಟಿಕೆಗಳಿಂದ ನಾನು ಸಂಪೂರ್ಣ ದೂರವಿದ್ದೆ. ಯಾರ ಜೊತೆಗೂ ಸಂಪರ್ಕದಲ್ಲಿರಲಿಲ್ಲ, ಏಕಾಂತದಲ್ಲಿದ್ದೆ. ಏಕಾಂತದಲ್ಲಿನ ನನ್ನಜೊತೆಗೆ ನಾನಿದ್ದೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಧ್ಯಾನ ಮಾಡಿದಾಗ ಏನು ಬೇಡಿಕೊಂಡ್ರಿ ಎಂಬ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರವೇನು ಗೊತ್ತಾ?!