Select Your Language

Notifications

webdunia
webdunia
webdunia
webdunia

6 ವರ್ಷದ ಮಗುವಿನ ಜತೆ 60ರ ಮೌಲ್ವಿ ನಿಖಾ

Afghan cleric
ಕಾಬೂಲ್ , ಸೋಮವಾರ, 1 ಆಗಸ್ಟ್ 2016 (11:27 IST)
ಆರು ವರ್ಷದ ಬಾಲಕಿಯನ್ನು 60 ವರ್ಷದ ವೃದ್ಧ ಮೌಲ್ವಿ ಮದುವೆಯಾದ ಖಂಡನೀಯ ಘಟನೆ ಅಫ್ಘಾನಿಸ್ತಾನದ ಘೋರ್ ಪ್ರಾಂತ್ಯದಲ್ಲಿ ನಡೆದಿದೆ.  ಮೌಲ್ವಿಯನ್ನೀಗ ಪೊಲೀಸರು ಬಂಧಿಸಿದ್ದಾರೆ.


ಆರೋಪಿಯನ್ನು ಮೌಲ್ವಿ ಮೊಹಮ್ಮದ್ ಕರೀಮ್ ಎಂದು ಗುರುತಿಸಲಾಗಿದ್ದು, ನಾನು ಒತ್ತಾಯ ಪೂರ್ವಕವಾಗಿ ಆಕೆಯನ್ನು ಮದುವೆಯಾಗಿಲ್ಲ. ಪೋಷಕರೇ ಆಕೆಯನ್ನು ನನಗೆ ಉಡುಗೊರೆಯಾಗಿ ನೀಡಿದ್ದರು. ಅವರ ಅನುಮತಿಯ ಮೇರೆಗೆ ನಾನು ಮದುವೆಯಾಗಿದ್ದೇನೆ ಎಂದಾತ ಹೇಳಿದ್ದಾನೆ.

ಆದರೆ ಆತನ ಹೇಳಿಕೆಯನ್ನು ತಳ್ಳಿ ಹಾಕಿರುವ ಮಗುವಿನ ಪೋಷಕರು ಮಗುವನ್ನ ಅಪಹರಣ ಮಾಡಿ ಮದುವೆಯಾಗಿರುವುದಾಗಿ ಹೇಳಿದ್ದಾರೆ. ಪೊಲೀಸರ ಪ್ರಶ್ನೆಗೆ ಬಾಲಕಿ ಏನನ್ನೂ ಉತ್ತರಿಸುತ್ತಿಲ್ಲ. ಆದರೆ   ಆತನನ್ನು ಕಂಡರೆ ನನಗೆ ಭಯವಾಗುತ್ತದೆ ಎಂದಷ್ಟೇ ಹೇಳುತ್ತಾಳೆ.

ಬಾಲಕಿಯನ್ನ ಮಕ್ಕಳ ಕಲ್ಯಾಣ ಕೇಂದ್ರದಲ್ಲಿಡಲಾಗಿದ್ದು ಸದ್ಯದಲ್ಲೇ ಆಕೆಯನ್ನು ಪೋಷಕರ  ಸುಪರ್ದಿಗೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು ಆಕೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾಳೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು  ದೃಢಪಟ್ಟಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕೇಶ್ ಸಿದ್ದರಾಮಯ್ಯ ನಿಧನಕ್ಕೆ ಸಂತಾಪ ಸೂಚಿಸಿದ ಚೆಲುವರಾಯಸ್ವಾಮಿ!